ಕರ್ನಾಟಕ

karnataka

ETV Bharat / bharat

ಭಾರತಕ್ಕೆ ಅಮೆರಿಕ ಅಧ್ಯಕ್ಷರ ಆಗಮನ... ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮಕ್ಕೆ ಕ್ಷಣಗಣನೆ

ಅಮೆರಿಕಾ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಬಹುನಿರೀಕ್ಷಿತ ಭಾರತ ಪ್ರವಾಸಕ್ಕೆ ಕ್ಷಣಗಣನೆ ಆರಂಭವಾಗಿದೆ.

ಡೋನಾಲ್ಡ್​ ಟ್ರಂಪ್
Donald trump

By

Published : Feb 24, 2020, 6:08 AM IST

Updated : Feb 24, 2020, 2:28 PM IST

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಬಹುನಿರೀಕ್ಷಿತ ಭಾರತ ಪ್ರವಾಸ, ಐತಿಹಾಸಿಕ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಶ್ವದ ದೊಡ್ಡಣ್ಣನ ಸ್ವಾಗತಕ್ಕೆ ಗುಜರಾತ್​ನ ಅಹಮದಾಬಾದ್‌ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ಇಂದು ಬೆಳಗ್ಗೆ ಗುಜರಾತಿನ ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ಪತ್ನಿ ಸಮೇತ ಬಂದಿಳಿಯಲಿರುವ ಟ್ರಂಪ್​ ಮತ್ತು ನಿಯೋಗದ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲಿದ್ದಾರೆ. ಇಲ್ಲಿಯೇ ಇವರಿಗೆ ಗೌರವ ವಂದನೆ ಸಲ್ಲಿಸಲಾಗುತ್ತದೆ. ಮೊದಲು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ​ಗೌರವ ಸಲ್ಲಿಸಲಿದ್ದಾರೆ. ಈ ವೇಳೆ ಗಣ್ಯರಿಗೆ ನೀಡಲಾಗುವ ಮಹಾತ್ಮ ಗಾಂಧಿ ಸ್ಮರಣಿಕೆಯನ್ನು ಟ್ರಂಪ್​​ ಅವರಿಗೆ ನೀಡಲಾಗುವುದು. ಈ ಸ್ಮರಣಿಕೆಯು ಚರಕ, ಚಕ್ರ ಮತ್ತು ಪುಸ್ತಕಗಳನ್ನೊಳಗೊಂಡಿರುತ್ತದೆ.

ಭಾರತದಲ್ಲಿ 36 ಗಂಟೆ ಕಳೆಯಲಿರುವ ಗಣ್ಯರು:

ಅಧ್ಯಕ್ಷ ಟ್ರಂಪ್​ ಜೊತೆ ಭಾರತಕ್ಕೆ ಆಗಮಿಸುತ್ತಿರುವ ಗಣ್ಯರು ಅವರ ಕುಟುಂಬ ಮತ್ತು ಸಚಿವರ ನಿಯೋಗದೊಂದಿಗೆ ಸುಮಾರು 36 ಗಂಟೆಗಳ ಕಾಲ ಭಾರತದಲ್ಲಿರುತ್ತಾರೆ. ಭೇಟಿಯ ಸಮಯದಲ್ಲಿ ಡೊನಾಲ್ಡ್​ ಟ್ರಂಪ್​, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಅನಂತರ ಮಧ್ಯಾಹ್ನ 1:15ಕ್ಕೆ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ‘ನಮಸ್ತೆ ಟ್ರಂಪ್​’ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಆಗ್ರಾದ ತಾಜ್‌ಮಹಲ್‌ ಭೇಟಿ:

ಮಧ್ಯಾಹ್ನ 3:30ಕ್ಕೆ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್​ ಅವರು ಆಗ್ರಾಗೆ ಪ್ರಯಾಣಬೆಳೆಸಲಿದ್ದಾರೆ. ಸಂಜೆ 4:30ಕ್ಕೆ ತಾಜ್​ಮಹಲ್​​ ವೀಕ್ಷಿಸಲಿದ್ದಾರೆ. ಮೂಲಗಳ ಪ್ರಕಾರ ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಜೊತೆಯಲ್ಲಿರುವುದಿಲ್ಲ. ಆಗ್ರಾದಿಂದ ಟ್ರಂಪ್​, ರಾಜಧಾನಿ ನವದೆಹಲಿಗೆ ತೆರಳಲಿದ್ದಾರೆ. ಸಂಜೆ ಪ್ರಧಾನಿ ಮೋದಿ ಏರ್ಪಡಿಸಿರುವ ಔತಣಕೂಟದಲ್ಲಿ ಟ್ರಂಪ್​​ ಭಾಗವಹಿಸಲಿದ್ದಾರೆ.

Last Updated : Feb 24, 2020, 2:28 PM IST

ABOUT THE AUTHOR

...view details