ಭಾವನಗರ :ಗುಜರಾತ್‌ನ ಭಾವನಗರ ಜಿಲ್ಲೆಯ ಸಿಹೋರ್ ಪಟ್ಟಣದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸೋಮವಾರ ಅಪವಿತ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್‌ನ ಸಿಹೋರ್ನಲ್ಲಿ ಅಂಬೇಡ್ಕರ್ ಪ್ರತಿಮೆ ಅಪವಿತ್ರಗೊಳಿಸಿದ ದುಷ್ಕರ್ಮಿಗಳು - ಬಸ್ಟ್ನನ್ನು ಬಗೆಟ್ನಿಂದ ಮುಚ್ಚಿ ಖಾಲಿ ಮದ್ಯದ ಬಾಟಲಿ
ಮುಂಬೈಯಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮನೆ ಹಾನಿಗೊಳಗಾದ ವಾರಗಳ ನಂತರ, ಗುಜರಾತ್‌ನ ಭಾವನಗರದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ.
ಅಂಬೇಡ್ಕರ್ ಪ್ರತಿಮೆ ಅಪವಿತ್ರಗೊಳಿಸಿದ ದುಷ್ಕರ್ಮಿಗಳು
ಯಾರೋ ಬಸ್ಟ್ನನ್ನು ಬಗೆಟ್ನಿಂದ ಮುಚ್ಚಿ ಖಾಲಿ ಮದ್ಯದ ಬಾಟಲಿಯನ್ನು ಅದರ ಬಳಿ ಇಟ್ಟಿದ್ದಾರೆ. ಈ ಘಟನೆ ಮಧ್ಯರಾತ್ರಿ ಮತ್ತು ಬೆಳಗ್ಗೆ 8ರ ನಡುವೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲಿನ ಜನರು ಬೆಳಗ್ಗೆ ಸಿಹೋರ್ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ನಂತರ ಐಪಿಸಿ ಸೆಕ್ಷನ್ 295ರ ಅಡಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಜನರು ನಂತರ ಬಸ್ಟ್ ಸ್ವಚ್ಛಗೊಳಿಸಿದ್ದಾರೆ.