ಕರ್ನಾಟಕ

karnataka

ETV Bharat / bharat

ನಿಮ್ಮ ಬಲವಾದ ಧ್ವನಿ ದಾಳಿಗೊಳಗಾದ ಜನರಿಗೆ ಧೈರ್ಯ ತಂದಿದೆ: ದೀದಿಗೆ ಕೃತಜ್ಞತಾ ಪತ್ರ ಬರೆದ ಅಮರ್ತ್ಯ ಸೇನ್ - Mamata Banerjee Letter

ವಿಶ್ವ ಭಾರತಿ ವಿಶ್ವವಿದ್ಯಾಲಯದ ಅಕ್ರಮ ಆಸ್ತಿ ಪ್ರಕರಣದಲ್ಲಿ ತಾವು ಇದ್ದೀರಾ ಎಂಬ ವರದಿಗಳ ವಿವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರೊಂದಿಗೆ ನಿಲ್ಲುವುದಾಗಿ ಬೆಂಬಲ ಸೂಚಿಸಿ ಪತ್ರ ಬರೆದಿದ್ದಾರೆ. ಅದಕ್ಕೆ ಸೇನ್ ಮರು ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.

Amartya thanks Mamata 'for reassuring people under attack'
ವಿಶ್ವ ಭಾರತಿ ವಿಶ್ವವಿದ್ಯಾಲಯದ ಅಕ್ರಮ ಆಸ್ತಿ ಪ್ರಕರಣ

By

Published : Dec 28, 2020, 6:19 PM IST

ಕೋಲ್ಕತಾ: ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಕೃತಜ್ಞತೆಯನ್ನು ವ್ಯಕ್ತಪಡಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದಿದ್ದಾರೆ. ದಾಳಿಗೆ ಒಳಗಾದ ಜನರಿಗೆ ಧೈರ್ಯ ತುಂಬಿದ್ದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸುವುದಾಗಿ ಅಮರ್ತ್ಯ ಸೇನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ವಿಶ್ವಭಾರತಿ ವಿವಿ ಆವರಣ ವಿವಾದ: ಗೋಡೆ ಕೆಡವಿ ಆಕ್ರೋಶ ವ್ಯಕ್ತಪಡಿಸಿದ ಜನ- ವಿಡಿಯೋ

ವಿಶ್ವ ಭಾರತಿ ವಿಶ್ವವಿದ್ಯಾಲಯದ ಅಕ್ರಮ ಪ್ರಕರಣದಲ್ಲಿ ತಾವು ಇದ್ದೀರಾ ಎಂಬ ವರದಿಗಳ ವಿವಾದ ಹಿನ್ನೆಲೆ ಸಿಎಂ ಮಮತಾ ಬ್ಯಾನರ್ಜಿ ಅವರು ಅಮರ್ತ್ಯ ಸೇನ್ ಅವರೊಂದಿಗೆ ನಿಲ್ಲುವುದಾಗಿ ಬೆಂಬಲ ಸೂಚಿಸಿ ಪತ್ರ ಬರೆದಿದ್ದರು. ಅದಕ್ಕೆ ಮರು ಪತ್ರ ಬರೆದಿರುವ ಅಮರ್ತ್ಯ ಸೇನ್ ಕೃತಜ್ಞತೆ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಪತ್ರ

ತನ್ನ ಆವರಣದಲ್ಲಿ ಹಲವು ವ್ಯಕ್ತಿಗಳು ಅಕ್ರಮ ಆಸ್ತಿ ಹೊಂದಿದ್ದಾರೆಂದು ಆರೋಪಿಸಿ ಪಶ್ಚಿಮ ಬಂಗಾಳದ ಏಕೈಕ ಕೇಂದ್ರ ವಿಶ್ವವಿದ್ಯಾಲಯವಾದ ವಿಶ್ವ ಭಾರತಿ ವಿಶ್ವವಿದ್ಯಾಲಯವು ಕಳೆದ ವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ವಿಶ್ವವಿದ್ಯಾಲಯವು ನೀಡಿದ ಆರೋಪ ಪಟ್ಟಿಯಲ್ಲಿ ಅಮರ್ತ್ಯ ಸೇನ್ ಅವರ ಹೆಸರು ಸಹ ಇತ್ತು. ಹಾಗಾಗಿ ಈ ಬಗ್ಗೆ ವಿವರಣೆ ಕೇಳಿ ಸಿಎಂ ಮಮತಾ ಬ್ಯಾನರ್ಜಿ ಅಮರ್ತ್ಯ ಸೇನ್ ಅವರಿಗೆ ಪತ್ರ ಬರೆದಿದ್ದರಲ್ಲದೆ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಅಭಯ ನೀಡಿದ್ದರು. ಹಾಗಾಗಿ ಇದಕ್ಕೆ ಕೃತಜ್ಞತೆ ಸಲ್ಲಿಸಿ ಅಮರ್ತ್ಯ ಸೇನ್ ಮರು ಪತ್ರ ಬರೆದಿದ್ದಾರೆ.

ಅಮರ್ತ್ಯ ಸೇನ್ ಪತ್ರ

ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿಮಗೆ ಸಂಪೂರ್ಣ ತಿಳುವಳಿಕೆ ಇದೆ. ನಿಮ್ಮ ಬಲವಾದ ಧ್ವನಿ ದಾಳಿಗೆ ಒಳಗಾದ ಜನರಿಗೆ ಧೈರ್ಯ ತುಂಬಿದೆ. ನಿಮ್ಮ ಬೆಂಬಲವೇ ದೊಡ್ಡ ಶಕ್ತಿಯ ಮೂಲವಾಗಿದೆ ಎಂದು ಅಮರ್ತ್ಯ ಸೇನ್ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಆಧಾರ ರಹಿತ ಆರೋಪ ಮಾಡಬಾರದು ಎಂದು ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧವೂ ಗುಡಿಗಿದ್ದರು. ವಿಶ್ವವಿದ್ಯಾಲಯದ ನಡೆ ಖಂಡಿಸಿ ಹಲವರು ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details