ನವದೆಹಲಿ:2019 ನೇ ಸಾಲಿನ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ನ (FIH) 'ಮಹಿಳಾ ಕೋಚ್ ಆಫ್ ದಿ ಇಯರ್' ಪ್ರಶಸ್ತಿಯನ್ನ ಡಚ್ನ ಮಹಿಳಾ ರಾಷ್ಟ್ರೀಯ ಹಾಕಿ ತಂಡದ ಕೋಚ್ ಅಲಿಸನ್ ಅನ್ನನ್ ಪಡೆದಿದ್ದಾರೆ.
'FIH ಮಹಿಳಾ ಕೋಚ್ ಆಫ್ ದಿ ಇಯರ್': ಸತತ 3ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಅಲಿಸನ್ ಅನ್ನನ್ - ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್
2017 ಮತ್ತು 2018 ರಲ್ಲಿ ಕೂಡ 'FIH ಮಹಿಳಾ ಕೋಚ್ ಆಫ್ ದಿ ಇಯರ್' ಪ್ರಶಸ್ತಿಯನ್ನ ಪಡೆದಿದ್ದ ಡಚ್ನ ಮಹಿಳಾ ರಾಷ್ಟ್ರೀಯ ಹಾಕಿ ತಂಡದ ಕೋಚ್ ಅಲಿಸನ್ ಅನ್ನನ್, 2019 ನೇ ಸಾಲಿನಲ್ಲೂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಅಲಿಸನ್ ಅನ್ನನ್
ನಮ್ಮ ತಂಡಕ್ಕೆ 2019 ಒಂದು ಕಠಿಣ ಮತ್ತು ಸವಾಲಿನ ವರ್ಷವಾಗಿತ್ತು. ಇಲ್ಲಿ ನಾವು ಬಹಳಷ್ಟು ಕಲಿತಿದ್ದೇವೆ, 2020 ರಲ್ಲಿ ಇನ್ನಷ್ಟು ಕಲಿಯಲು ನಾನು ಬಯಸುತ್ತೇನೆ. 10ನೇ ಬಾರಿಗೆ ನಾವು ಯುರೋಪಿಯನ್ ಹಾಕಿ ಚಾಂಪಿಯನ್‌ಶಿಪ್ ಗೆದ್ದಿದ್ದು, 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದೇವೆ. ನನಗೆ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಅಲಿಸನ್ ಹೇಳಿದ್ದಾರೆ.
ಇನ್ನು ಅಲಿಸನ್ ಅನ್ನನ್ 2017 ಮತ್ತು 2018 ರಲ್ಲಿ ಕೂಡ 'FIH ಮಹಿಳಾ ಕೋಚ್ ಆಫ್ ದಿ ಇಯರ್' ಪ್ರಶಸ್ತಿಯನ್ನ ಪಡೆದಿದ್ದು, ಸತತ 3ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಂತಾಗಿದೆ.