ಕರ್ನಾಟಕ

karnataka

ETV Bharat / bharat

ರಾಜಕೀಯ ಅಲ್ಲ, ನನ್ನನ್ನು ನಾನು ಕಂಡುಕೊಳ್ಳಲು ಅಮರನಾಥ ಯಾತ್ರೆ ಮಾಡಿದೆ... ಮನ್​ಕಿಬಾತ್​ನಲ್ಲಿ ಮೋದಿ - undefined

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಇಂದು ಮೊದಲ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಹಲವು ವಿಚಾರ ಕುರಿತು ಮಾತನಾಡಿದ್ದಾರೆ.

ಮೋದಿ ಹೇಳಿದ್ದೇನು ಗೊತ್ತಾ

By

Published : Jun 30, 2019, 1:15 PM IST

ನವದೆಹಲಿ: ಜನರ ಮೇಲಿನ ನಂಬಿಕೆಯಿಂದ ಕಳೆದ ಕಾರ್ಯಕ್ರಮದಲ್ಲಿ ಮತ್ತೆ ಮನ್​ ಕಿ ಬಾತ್​ ಮುಂದುವರೆಸುವ ಮಾತುಕೊಟ್ಟಿದ್ದೆ. ಇದನ್ನ ಕೆಲವರು ಅತಿಯಾದ ವಿಶ್ವಾಸ ಎಂದು ಕರೆದರು. ಆದರೆ, ಇದಕ್ಕೆ ಜನರ ಮೇಲೆ ನಾನಿಟ್ಟಿದ್ದ ನಂಬಿಕಯೇ ಕಾರಣ. ಹೀಗಂತ ಎರಡನೇ ಬಾರಿ ಅಧಿಕಾರಕ್ಕೇರಿದ ಬಳಿಕ ನಡೆಸಿದ ಮೊದಲ ಮನ್​ಕಿ ಬಾತ್​ನಲ್ಲಿ ಮೋದಿ ಹೇಳಿದ್ದಾರೆ.

ಮನ್​ ಕಿ ಮಾತ್​ ಕಾರ್ಯಕ್ರಮಕ್ಕಾಗಿ ನನಗೆ ಅನೇಕ ಪತ್ರ ಮತ್ತು ದೂರವಾಣಿ ಕರೆಗಳು ಬಂದಿವೆ. ಆದರೆ ಕಳೆದ ಕೆಲ ವರ್ಷಳಿಂದ ಬರುತ್ತಿರುವ ಪತ್ರಗಳಲ್ಲಿ ಯಾವುದೇ ದೂರುಗಳ ಉಲ್ಲೇಖ ಇಲ್ಲ. ಜನರು ಪ್ರಧಾನಮಂತ್ರಿಗೆ ಬರೆಯುತ್ತಿರುವ ಪತ್ರದಲ್ಲಿ ತಮಗಾಗಿ ಏನನ್ನು ಕೇಳುತ್ತಿಲ್ಲ. ಇದು ಕೋಟಿ ಕೋಟಿ ಜರ ದೊಡ್ಡ ಗುಣ ಎಂದು ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ 60 ಕೋಟಿ ಜನ ಮತ ಚಲಾಯಿಸಿದ್ದಾರೆ. ಇದು ಕಡಿಮೆ ಇರ ಬಹುದು ಆದ್ರೆ ಚೀನಾ ಹೊರತುಪಡಿಸಿದರೆ ನಮ್ಮ ದೇಶ ಜಗತ್ತನ ಒಂದು ದೃಷ್ಟಿಕೊನದತ್ತ ಕೊಡೊಯ್ಯುತ್ತಿದೆ. ಮತದಾನ ಮಾಡಿರವರ ಸಂಖ್ಯೆ ಇತರೆ ರಾಷ್ಟ್ರಗಳ ಜನ ಸಂಖ್ಯೆಯನ್ನೂ ಮೀರಿಸಿದೆ. ಅಮೇರಿಕಾದ ಜನಸಂಖ್ಯೆಯ ಎರಡ ರಷ್ಟು ಜನ, ಮತ ಚಲಾಯಿಸಿದ್ದಾರೆ ಎಂದಿದ್ದಾರೆ.

ಮನ್​ ಕಿ ಬಾತ್​ನಲ್ಲಿ ನೀರಿನ ಸಮಸ್ಯೆ ಕುರಿತು ಮಾತನಾಡಿದ ಮೋದಿ, ಕಳೆದ ಕೆಲ ತಿಂಗಳಿನಿಂದ ದೇಶದ ಹಲವೆಡೆ ನೀರಿನ ಅಭಾವ ಉಂಟಾಗಿದೆ. ಹೀಗಾಗಿ ನೀರಿನ ಸಂರಕ್ಷಣೆ ಮಾಡಬೇಕಾಗಿದೆ. ನಾನು ಕೂಡ ಗ್ರಾಮದ ಮುಖ್ಯಸ್ಥರಿಗೆ ಪತ್ರಗಳನ್ನ ಬರೆದಿದ್ದು ನೀರಿನ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಅವರವರ ಭಾಗಕ್ಕೆ ಅನುಗುಣವಾಗಿ ಯಾವುದಾದರೊಂದು ವಿಧಾನದ ಮೂಲಕ ನಾವು ನೀರನ್ನ ಸಂರಕ್ಷಣೆ ಮಾಡಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಇನ್ನು ಚುನಾವಣೆಗೂ ಮೊದಲು ಕೈಗೊಂಡಿದ್ದ ಕೇದಾರನಾಥ ಯಾತ್ರೆ ಬಗ್ಗೆ ಮಾತನಾಡಿದ ಮೋದಿ, ತುಂಬಾ ಜನ ರಾಜಕೀಯ ಕಾರಣಗಳಿಂದ ಯಾತ್ರೆ ಕೈಗೊಂಡಿದ್ದೆ ಎಂದುಕೊಂಡಿದ್ದಾರೆ. ಆದರೆ ನನ್ನನ ನಾನು ಕಂಡುಕೊಳ್ಳಲು ಈ ಯಾತ್ರೆ ಸಹಾಯಮಾಡಿದೆ ಎಂದು ಮೋದಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details