ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಆಲ್‌ಪ್ರಜೋಲಮ್ ಡ್ರಗ್​ನ ಸ್ಥಿತಿ ಗತಿ ಹೇಗಿದೆ..?

ಆಲ್‌ಪ್ರಜೋಲಮ್ ಬೆಂಜೊಡಿಯಜೆಪೈನ್ಸ್ ಎಂಬ ಔಷಧಿಗಳ ಗುಂಪಿಗೆ ಸೇರಿದೆ. ಇದನ್ನು ಅಲ್ಪಾವಧಿಯ ಆ್ಯಂಕ್ಸೈಟಿಯ ಪರಿಹಾರಕ್ಕಾಗಿ ಅಥವಾ ಪ್ಯಾನಿಕ್ ಡಿಸಾರ್ಡರ್‌ಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ವೈದ್ಯರು ಸೂಚಿಸದರೆ ಮಾತ್ರ ತೆಗೆದುಕೊಳ್ಳಬಹುದಾದ ಔಷಧಿ ಇದಾಗಿದೆ.

By

Published : Oct 19, 2020, 11:13 PM IST

alprazolam
alprazolam

ಆಲ್‌ಪ್ರಜೋಲಮ್ - ಜೆನೆರಿಕ್ ಆ್ಯಂಟಿ ಆ್ಯಂಕ್ಸೈಟಿ ಡ್ರಗ್ ಭಾರತದ ನಗರಗಳಲ್ಲಿ ಬಹು ಬೇಡಿಕೆಯ ಡ್ರಗ್ ಆಗಿದೆ. ವೃತ್ತಿಪರರು, ಸಮಾಜವಾದಿಗಳು ಮತ್ತು ಗೃಹಿಣಿಯರು ಈ ಕಡಿಮೆ ಬೆಲೆಯ ಡ್ರಗನ್ನು ಸೇವಿಸುತ್ತಾರೆ. ಇದು ವೇಗವಾಗಿ ಜೀವನದ ಮೇಲೆ ಅಡ್ಡಪರಿಣಾಮ ಬಿರುತ್ತದೆ.

ಇದು ವೇಗವಾಗಿ ಅಮಲೇರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಗುಣವು ಹೆಚ್ಚಿನ ಆತ್ಮಹತ್ಯಾ ಸಾಮರ್ಥ್ಯವನ್ನು ನೀಡುತ್ತದೆ. ಆತ್ಮಹತ್ಯಾ ಪ್ರವೃತ್ತಿಯನ್ನು ಹೊಂದಿರುವವರು ಇದನ್ನು ಸೇವಿಸದರೆ ಆತ್ಮಹತ್ಯೆಗೂ ಯತ್ನಿಸುತ್ತಾರೆ. ಕಳೆದ ವರ್ಷ ಭಾರತೀಯ ಕೇಂದ್ರ ಆರೋಗ್ಯ ಸಚಿವಾಲಯವು ಆಲ್‌ಪ್ರಜೋಲಮ್ ಅನ್ನು ನಿಷೇಧಿಸಿದೆ.

ಆಲ್‌ಪ್ರಜೋಲಮ್ ಎಂದರೇನು?

ಆಲ್‌ಪ್ರಜೋಲಮ್ ಬೆಂಜೊಡಿಯಜೆಪೈನ್ಸ್ ಎಂಬ ಔಷಧಿಗಳ ಗುಂಪಿಗೆ ಸೇರಿದೆ. ಇದನ್ನು ಅಲ್ಪಾವಧಿಯ ಆ್ಯಂಕ್ಸೈಟಿಯ ಪರಿಹಾರಕ್ಕಾಗಿ ಅಥವಾ ಪ್ಯಾನಿಕ್ ಡಿಸಾರ್ಡರ್‌ಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ವೈದ್ಯರು ಸೂಚಿಸದರೆ ಮಾತ್ರ ತೆಗೆದುಕೊಳ್ಳಬಹುದಾದ ಔಷಧಿ ಇದಾಗಿದೆ. ಕ್ಸಾನಾಕ್ಸ್ ®, ರಾಲೋಜಮ್ ®, ಕಲ್ಮಾ ® ಆಲ್‌ಪ್ರಾಕ್ಸ್ ® ಇದು ಸಾಮಾನ್ಯ ಬ್ರಾಂಡ್‌ಗಳಾಗಿವೆ.

ಮೆದುಳಿನಲ್ಲಿನ ಕೆಲವು ನರಪ್ರೇಕ್ಷಕಗಳ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಆಲ್‌ಪ್ರಜೋಲಮ್ ಕಾರ್ಯನಿರ್ವಹಿಸುತ್ತದೆ ಎಂದು ಭಾವಿಸಲಾಗಿದೆ. ಆ್ಯಂಕ್ಸೈಟಿ ಕಾಯಿಲೆಗಳು, ಪ್ಯಾನಿಕ್ ಡಿಸಾರ್ಡರ್ಸ್ ಮತ್ತು ಖಿನ್ನತೆಯಿಂದ ಉಂಟಾಗುವ ಆತಂಕಗಳಿಗೆ ಚಿಕಿತ್ಸೆ ನೀಡಲು ಆಲ್‌ಪ್ರಜೋಲಮ್ ಅನ್ನು ಬಳಸಲಾಗುತ್ತದೆ.

ಆನ್​ಲೈನ್ ಮೂಲಕ ಅಥವಾ ಯುನೈಟೆಡ್ ಸ್ಟೇಟ್ಸ್‌ನ ಹೊರಗಡೆ ಆಲ್‌ಪ್ರಜೋಲಮ್ ಖರೀದಿಸುವುದು ಅಪಾಯಕಾರಿ. ಯು.ಎಸ್.ನ ಹೊರಗೆ ಈ ಔಷಧಿಗಳ ಮಾರಾಟ ಮತ್ತು ವಿತರಣೆ ಆಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ಸುರಕ್ಷಿತ ಬಳಕೆಯ ನಿಯಮಗಳನ್ನು ಅನುಸರಿಸುವುದಿಲ್ಲ.

ಈ ಔಷಧಿಗಳು ಅಪಾಯಕಾರಿ ಪದಾರ್ಥಗಳನ್ನು ಹೊಂದಿರಬಹುದು, ಅಥವಾ ಪರವಾನಗಿ ಪಡೆಯದ ಔಷಧಾಲಯದಿಂದ ವಿತರಿಸಲ್ಪಡಬಹುದು. ಆಲ್‌ಪ್ರಜೋಲಮ್ ಅನ್ನು ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಮತ್ತು ಮನೋವೈದ್ಯರು ಪ್ಯಾನಿಕ್ ಮತ್ತು ಆ್ಯಂಕ್ಸೈಟಿ ಕಾಯಿಲೆಗಳಿಗೆ ಸೂಚಿಸುತ್ತಾರೆ.

ಇದು ಔಷಧಿಗಳ ವರ್ಗಕ್ಕೆ ಸೇರಿದೆ. ಮೆದುಳನ್ನು ಶಾಂತಗೊಳಿಸಲು ಮತ್ತು ನರಗಳ ಮೇಲೆ (ಕೇಂದ್ರ ನರಮಂಡಲ) ಕಾರ್ಯನಿರ್ವಹಿಸುವ ಬೆಂಜೊಡಿಯಜೆಪೈನ್ಗಳು ಇವಾಗಿವೆ. ದೇಹದಲ್ಲಿನ ಒಂದು ನಿರ್ದಿಷ್ಟ ನೈಸರ್ಗಿಕ ರಾಸಾಯನಿಕದ ಪರಿಣಾಮಗಳನ್ನು ಹೆಚ್ಚಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.

ಇದು ಅನೇಕ ಜನರಿಗೆ ಸಹಾಯ ಮಾಡಿದರೂ, ಈ ಔಷಧಿ ಕೆಲವೊಮ್ಮೆ ವ್ಯಸನಕ್ಕೆ ಕಾರಣವಾಗಬಹುದು. ನೀವು ಮಾದಕವಸ್ತು ಬಳಕೆಯ ಅಸ್ವಸ್ಥತೆಯನ್ನು ಹೊಂದಿದ್ದರೆ (ಉದಾಹರಣೆಗೆ ಡ್ರಗ್ಸ್ / ಮದ್ಯದ ಅತಿಯಾದ ಬಳಕೆ ಅಥವಾ ವ್ಯಸನ) ಈ ಅಪಾಯ ಹೆಚ್ಚಿರಬಹುದು. ವ್ಯಸನದ ಅಪಾಯವನ್ನು ಕಡಿಮೆ ಮಾಡಲು ಈ ಔಷಧಿಗಳನ್ನು ನಿಖರವಾಗಿ ಸೂಚಿಸಿದಂತೆ ತೆಗೆದುಕೊಳ್ಳಿ. ಹೆಚ್ಚಿನ ವಿವರಗಳಿಗಾಗಿ ನಿಮ್ಮ ವೈದ್ಯರು ಅಥವಾ ಔಷಧಿಕಾರರನ್ನು ಕೇಳಿ.

ಈ ಔಷಧಿ ಯಾವ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು?

ಆಲ್‌ಪ್ರಜೋಲಮ್ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಈ ಯಾವುದೇ ಲಕ್ಷಣಗಳು ತೀವ್ರವಾಗಿದ್ದರೆ ನಿಮ್ಮ ವೈದ್ಯರಿಗೆ ತಿಳಿಸಿ: ಅರೆನಿದ್ರಾವಸ್ಥೆ, ಲಘು ತಲೆನೋವು, ತಲೆನೋವು, ದಣಿವು, ತಲೆತಿರುಗುವಿಕೆ, ಕಿರಿಕಿರಿ, ಅತಿಯಾದ ಮಾತುಕತೆ, ಏಕಾಗ್ರತೆಯಲ್ಲಿ ತೊಂದರೆ, ಬಾಯಿ ಒಣಗುವಿಕೆ, ಅತಿಯಾಘಿ ಜೊಲ್ಲು ಸುರಿಯುವುದು, ಲೈಂಗಿಕ ಆಸಕ್ತಿ ಅಥವಾ ಸಾಮರ್ಥ್ಯದಲ್ಲಿನ ಬದಲಾವಣೆಗಳು, ವಾಕರಿಕೆ, ಮಲಬದ್ಧತೆ, ಹಸಿವಿನಲ್ಲಿ ಬದಲಾವಣೆ, ತೂಕ ಬದಲಾವಣೆ, ಮೂತ್ರ ವಿಸರ್ಜನೆಗೆ ತೊಂದರೆ, ಕೀಲು ನೋವು, ಉಸಿರಾಟದ ತೊಂದರೆ, ರೋಗ ಗ್ರಸ್ತವಾಗುವಿಕೆ, ಭ್ರಮೆ, ತೀವ್ರವಾದ ಚರ್ಮದ ತುರಕೆ ಅಥವಾ ಎಲರ್ಜಿ, ಹಳದಿ ಬಣ್ಣಕ್ಕೆ ತಿರುಗುವ ಚರ್ಮ ಅಥವಾ ಕಣ್ಣುಗಳು, ಖಿನ್ನತೆ, ಮರೆವು, ಗೊಂದಲ, ನಡವಳಿಕೆ ಅಥವಾ ಮನಸ್ಥಿತಿಯಲ್ಲಿ ಅಸಾಮಾನ್ಯ ಬದಲಾವಣೆಗಳು, ನಿಮ್ಮನ್ನು ಹಾನಿ ಮಾಡುವ ಅಥವಾ ಕೊಲ್ಲುವ ಬಗ್ಗೆ ಯೋಚಿಸುವುದು ಅಥವಾ ಹಾಗೆ ಮಾಡಲು ಪ್ರಯತ್ನಿಸುವುದು, ಸಮನ್ವಯ ಅಥವಾ ಸಮತೋಲನದ ಸಮಸ್ಯೆಗಳು ಸೇರಿದಂತೆ ಆಲ್‌ಪ್ರಜೋಲಮ್ ಇತರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಈ ಔಷಧಿ ತೆಗೆದುಕೊಳ್ಳುವಾಗ ನಿಮಗೆ ಏನಾದರೂ ಅಸಾಮಾನ್ಯ ಸಮಸ್ಯೆಗಳಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಹ್ಯಾಶಿಶ್ ಎಂದರೇನು ಮತ್ತು ಅದನ್ನು ಹೇಗೆ ತಯಾರಿಸಲಾಗುತ್ತದೆ?

ಸಂಕ್ಷಿಪ್ತವಾಗಿ ಹ್ಯಾಶ್, ಪ್ರಬುದ್ಧ ಮತ್ತು ಅಪ್ರಚಲಿತ ಹೆಣ್ಣು ಗಾಂಜಾ ಸಸ್ಯಗಳ ಹೂಬಿಡುವ ಮೇಲ್ಭಾಗಗಳ “ಕೀಫ್” ಅಥವಾ ಒಣಗಿದ ರಾಳದಿಂದ ಪಡೆಯಲಾಗುತ್ತದೆ. ರಾಳದ ಗ್ರಂಥಿಗಳನ್ನು ಟ್ರೈಕೋಮ್ಸ್ ಅಥವಾ ಹರಳುಗಳು ಎಂದು ಕರೆಯಲಾಗುತ್ತದೆ.

ಪುಡಿಮಾಡಿದ ರಾಳವನ್ನು ಕೈಯಿಂದ ಸಂಗ್ರಹಿಸಿ, ಸಸ್ಯಗಳನ್ನು ಯಾಂತ್ರಿಕವಾಗಿ ಹೊಡೆಯುವುದರ ಮೂಲಕ ಅಥವಾ ಗಾಂಜಾ ಸಸ್ಯಗಳನ್ನು ಹಿಮಾವೃತ ನೀರಿನಲ್ಲಿ ಮುಳುಗಿಸಿ ನಂತರ ಸಣ್ಣ ಜರಡಿಗಳನ್ನು ಬಳಸಿ ಟ್ರೈಕೋಮ್‌ಗಳನ್ನು ತೆಗೆಯುವ ಮೂಲಕ ಹ್ಯಾಶ್ ಅನ್ನು ಕೊಯ್ಲು ಮಾಡಲಾಗುತ್ತದೆ.

ನಂತರ ಅವುಗಳನ್ನು ಒಣಗಿಸಲಾಗುತ್ತದೆ (ಈ ರೀತಿಯ ಹ್ಯಾಶಿಶ್ ಅನ್ನು ಬಬಲ್ ಹ್ಯಾಶ್ ಎಂದು ಕರೆಯಲಾಗುತ್ತದೆ ಹ್ಯಾಶ್). ಉಳಿದ ಕೀಫ್ ಅನ್ನು ಸಾಮಾನ್ಯವಾಗಿ ಕೇಕ್ ಅಥವಾ ಬ್ಲಾಕ್​ಗಳಾಗಿ ಪರಿವರ್ತಿಸಲಾಗುತ್ತದೆ. ನಂತರ ಅವುಗಳನ್ನು ಕೊಳವೆಗಳಲ್ಲಿ ಹಾಕಿ ಧೂಮಪಾನ ಮಾಡಲಿ ಬಳಸಲಾಗುತ್ತದೆ. ಅದರ ಆವಿಯನ್ನು ಉಸಿರಾಡಲಾಗುತ್ತದೆ ಅಥವಾ ಗಾಂಜಾದ ಜೊತೆಗೆ ಬೆರೆಸಲಾಗುತ್ತದೆ.

ಹ್ಯಾಶ್ ಮೃದು ಗಟ್ಟಿಯಾಗಿಯೂ ಆಗಿರಬಹುದು. ಇದು ಕೆಂಪು, ಕಪ್ಪು, ಕಂದು, ಹಸಿರು, ಹಳದಿ ಅಥವಾ ಹೊಂಬಣ್ಣದ ಬಣ್ಣದ್ದಾಗಿರಬಹುದು. ಹ್ಯಾಶ್ ಅನ್ನು ಅಡುಗೆಯಲ್ಲಿಯೂ ಬಳಸಬಹುದು. ಏಕೆಂದರೆ ಇದು ತೈಲಗಳು, ಬೆಣ್ಣೆ ಅಥವಾ ಕೆನೆಯಂತಹ ಆಹಾರ ಪದಾರ್ಥದಲ್ಲಿ ಕರಗುತ್ತದೆ. ಹೀಗಾಗಿ ಇದನ್ನು ಬ್ರೌನಿಗಳಂತಹ ಆಹಾರಗಳಾಗಿ ತಯಾರಿಸಬಹುದು. ಹ್ಯಾಶಿಶ್​ನ ರಾಳವನ್ನು ಹೊರತೆಗೆದು ಹ್ಯಾಶ್ ಎಣ್ಣೆಯಾಗಿ ತಯಾರಿಸಬಹುದು.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ, ಗಾಂಜಾವು ಪ್ರಪಂಚದಲ್ಲಿ ಸಾಮಾನ್ಯವಾಗಿ ದುರುಪಯೋಗಪಡಿಸಿಕೊಳ್ಳುವ, ಕಳ್ಳಸಾಗಣೆ ಮಾಡುವ ಮತ್ತು ಅಕ್ರಮವಾಗಿ ಬೆಳೆಸುವ ಡ್ರಗ್ ಆಗಿದೆ. ಗಾಂಜಾ ಮತ್ತು ಹ್ಯಾಶಿಶ್ ಎರಡೂ ಗಾಂಜಾ ಸಟಿವಾ ಅಥವಾ ಗಾಂಜಾ ಇಂಡಿಕಾ (ಅಥವಾ ಹೈಬ್ರಿಡ್) ಸಸ್ಯದಿಂದ ಬರುತ್ತದೆ. ಗಾಂಜಾ ಸಸ್ಯದ ಹಲವು ವಿಭಿನ್ನ ತಳಿಗಳಿವೆ. ಗಾಂಜಾ ಟಿಎಚ್​ಸಿ (ಡೆಲ್ಟಾ-9-ಟೆಟ್ರಾಹೈಡ್ರೊಕಾನ್ನಾಬಿನಾಲ್) ಹೊಂದಿರುತ್ತದೆ. ಇದು ಮನಸ್ಸನ್ನು ಬದಲಾಯಿಸುವ ಗುಣಗಳನ್ನು ಹೊಂದಿದೆ ಮತ್ತು ಮೆದುಳಿನಲ್ಲಿರುವ ಕ್ಯಾನಬಿನಾಯ್ಡ್ ಗ್ರಾಹಕಗಳೊಂದಿಗೆ ಸಂವಹನ ನಡೆಸುತ್ತದೆ.

ಮಿದುಳು ಮತ್ತು ದೇಹದ ಮೇಲೆ ಮರಿಜುವಾನಾ ಮತ್ತು ಹ್ಯಾಶಿಶ್​ನ ಪರಿಣಾಮಗಳು:

ಗಾಂಜಾ ಮತ್ತು ಹ್ಯಾಶಿಶ್ ಮೆದುಳು ಮತ್ತು ದೇಹದ ಮೇಲೆ ಒಂದೇ ರೀತಿಯ ಪರಿಣಾಮ ಬೀರುತ್ತವೆ. ಏಕೆಂದರೆ ಅವುಗಳು ಎರಡೂ ಟಿಎಚ್‌ಸಿ ಹೊಂದಿರುತ್ತವೆ. ಗಾಂಜಾ ವಿಶ್ರಾಂತಿ, ಯೂಫೋರಿಯಾ, ಪ್ರೇರಣೆಯ ಕೊರತೆ, ದುರ್ಬಲ ಮೋಟಾರ್ ನಿಯಂತ್ರಣ, ಹೆಚ್ಚಿದ ಹಸಿವು, ಮೆಮೊರಿ ಕೊರತೆ, ವಿಕೃತ ಸಂವೇದನೆ ಮತ್ತು ಸಮಯದ ಗ್ರಹಿಕೆಗಳಿಗೆ ಕಾರಣವಾಗುತ್ತದೆ. ಗಾಂಜಾ ಅಥವಾ ಹ್ಯಾಶಿಶ್‌ ವ್ಯಸನಿಗಳಲ್ಲಿ ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಗಳು, ಅನಿಯಮಿತ ಹೃದಯ ಬಡಿತ, ಅರಿವಿನ ಕುಸಿತ ಮತ್ತು ಮೆದುಳಿನ ಬೆಳವಣಿಗೆಯ ಅಡ್ಡಿಗಳು ಉಂಟಾಗುತ್ತಿದೆ. ಆತಂಕ, ಖಿನ್ನತೆ, ಕಿರಿಕಿರಿ, ನಿದ್ರೆಯ ತೊಂದರೆಗಳು, ಚಡಪಡಿಕೆ, ಕಡುಬಯಕೆಗಳು, ಹಸಿವು ಕಡಿಮೆಯಾಗುವುದು, ಅರಿವಿನ ದೌರ್ಬಲ್ಯ ಮತ್ತು ಮನಸ್ಥಿತಿಯ ಅಡಚಣೆಗಳಂತಹ ಸಮಸ್ಯೆಗಳು ಕೂಡಾ ಉಂಟಾಗುತ್ತದೆ. ನಿಯಮಿತವಾಗಿ ಗಾಂಜಾ ಬಳಸುವವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಇದರ ವ್ಯಸನಿಯಾಗಬಹುದು ಎಂದು ಎನ್ಐಡಿಎ ಎಚ್ಚರಿಸಿದೆ.

ABOUT THE AUTHOR

...view details