ಕರ್ನಾಟಕ

karnataka

ETV Bharat / bharat

10 ವರ್ಷಗಳ ಕಾಲ ತಮಿಳುನಾಡಿಗೆ ಏನು ಮಾಡಿದ್ದಿರಾ? ಡಿಎಂಕೆಗೆ ಅಮಿತ್ ಶಾ ಪ್ರಶ್ನೆ - ಬಿಜೆಪಿ ಎಐಎಡಿಎಂಕೆ ಮೈತ್ರಿ

ಕೇಂದ್ರದಲ್ಲಿ ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ತಮಿಳುನಾಡುಗಾಗಿ ಅವರು ಏನು ಮಾಡಿದ್ದಾರೆಂದು ಪಟ್ಟಿ ಮಾಡಲು ಡಿಎಂಕೆ ಸಿದ್ಧವಾಗಿದೆಯೇ? ಕುಟುಂಬ ರಾಜಕಾರಣ ಹೊಂದುಕೊಂಡಿದ್ದವರಿಗೆ ಜನರು ಪಾಠ ಕಲಿಸುತ್ತಿದ್ದಾರೆ. 2ಜಿ ಕಳಂಕಿತ ಜನರಿಗೆ ರಾಜಕೀಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕೇಂದ್ರ ಸಚಿವ ಅಮಿತ್​ ಶಾ ಹೇಳಿದರು.

Amit Shah
ಅಮಿತ್ ಶಾ

By

Published : Nov 21, 2020, 7:40 PM IST

ಚೆನ್ನೈ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ತಮಿಳುನಾಡು ಚುನಾವಣೆಗೆ ಬಿಜೆಪಿಯೊಂದಿಗಿನ ಎಐಎಡಿಎಂಕೆ ಮೈತ್ರಿ ಮುಂದುವರಿಯಲಿದೆ ಎಂದು ಆಡಳಿತ ಪಕ್ಷದ ಸಂಯೋಜಕ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್​ ಸೆಲ್ವಂ ಅವರು ಕೇಂದ್ರ ಸಚಿವ ಅಮಿತ್ ಶಾ ಚೆನ್ನೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಕಟಿಸಿದರು.

ವಿಧಾನಸಭಾ ಚುನಾವಣೆಗೆ ಲೋಕಸಭಾ ಮೈತ್ರಿ ಮುಂದುವರಿಯಲಿದೆ. ನಾವು 10 ವರ್ಷಗಳ ಉತ್ತಮ ಆಡಳಿತವನ್ನು ನೀಡಿದ್ದೇವೆ. ನಮ್ಮ ಮೈತ್ರಿ 2021ರ ಚುನಾವಣೆಯಲ್ಲಿ ಗೆಲ್ಲುತ್ತದೆ. ತಮಿಳುನಾಡು ಯಾವಾಗಲೂ ಪ್ರಧಾನಿ ನರೇಂದ್ರಮೋದಿಯನ್ನು ಬೆಂಬಲಿಸುತ್ತದೆ ಎಂದು ಮುಖ್ಯಮಂತ್ರಿ ಇ ಪಳನಿಸ್ವಾಮಿ ಹೇಳಿದರು.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ್ದಕ್ಕಾಗಿ ತಮಿಳುನಾಡು ಸರ್ಕಾರವನ್ನು ಶ್ಲಾಘಿಸಿದ ಶಾ, ಕೇಂದ್ರದ ಶ್ರೇಯಾಂಕದ ಪ್ರಕಾರ ಈ ವರ್ಷ ದೇಶದಲ್ಲಿ ರಾಜ್ಯವು ಉತ್ತಮವಾಗಿ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.

ಹಲವು ರಾಷ್ಟ್ರಗಳು ಕೋವಿಡ್​ ವಿರುದ್ಧ ಹೋರಾಡುತ್ತಿರುವಾಗ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಅವರಿಗಿಂತ ಒಂದು ಹೆಜ್ಜೆ ಮುಂದಿದೆ. ಕೋವಿಡ್ ವಿರುದ್ಧ ಹೋರಾಟದಲ್ಲಿ ಇ ಪಳನಿಸ್ವಾಮಿ ಮತ್ತು ಓ ಪನ್ನೀರ್​ ಸೆಲ್ವಂ ಅವರನ್ನು ನಾನು ಶ್ಲಾಘಿಸುತ್ತೇನೆ. ತಮಿಳುನಾಡಿನ ಚೇತರಿಕೆ ಪ್ರಮಾಣ ಹೆಚ್ಚಾಗಿದೆ. ತಮಿಳುನಾಡು ಹಂಚಿಕೊಂಡ ಕೋವಿಡ್ ಅಂಕಿಅಂಶಗಳು ಉತ್ತಮವಾಗಿವೆ. ತಮಿಳುನಾಡು ಗರ್ಭಿಣಿಯರನ್ನು ನೋಡಿಕೊಳ್ಳುವಂತೆ ಬೇರೆ ಯಾವ ರಾಜ್ಯವೂ ನೋಡಿಕೊಂಡಿಲ್ಲ ಎಂದರು.

ಕೇಂದ್ರದಲ್ಲಿ ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ತಮಿಳುನಾಡುಗಾಗಿ ಅವರು ಏನು ಮಾಡಿದ್ದಾರೆಂದು ಪಟ್ಟಿ ಮಾಡಲು ಡಿಎಂಕೆ ಸಿದ್ಧವಾಗಿದೆಯೇ? ಕುಟುಂಬ ರಾಜಕಾರಣ ಹೊಂದುಕೊಂಡಿದ್ದವರಿಗೆ ಜನರು ಪಾಠ ಕಲಿಸುತ್ತಿದ್ದಾರೆ. 2ಜಿ ಕಳಂಕಿತ ಜನರಿಗೆ ರಾಜಕೀಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಶಾ ಹೇಳಿದರು.

ABOUT THE AUTHOR

...view details