ಉತ್ತರ ಪ್ರದೇಶ:ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆಸಿದ ಆರೋಪ ಹೊತ್ತಿರುವವರ ಹೆಸರು, ಭಾವಚಿತ್ರ, ವಿಳಾಸವನ್ನೊಳಗೊಂಡಂತೆ ಯುಪಿ ಸರ್ಕಾರವೇ ಹಾಕಿದ್ದ ಪೋಸ್ಟರ್ಸ್, ಹೋರ್ಡಿಂಗ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ.
ಯುಪಿಯಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಅನೇಕ ಮಂದಿ ಮೃತಪಟ್ಟು, ಆಸ್ತಿ-ಪಾಸ್ತಿ ಹಾನಿಯಾಗಿತ್ತು. 100ಕ್ಕೂ ಹೆಚ್ಚು ಗಲಭೆಕೋರರನ್ನು ವಿಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿ ಮೂಲಕ ಗುರುತಿಸಿದ್ದ ಪೊಲೀಸರು 'ವಾಂಟೆಡ್ ದಂಗೆಕೋರರು' ಎಂಬ ಪೋಸ್ಟರ್ಗಳನ್ನ ಬಿಡುಗಡೆ ಮಾಡಿ, ಅದನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಿದ್ದರು. ಅಲ್ಲದೇ ಆಸ್ತಿ-ಪಾಸ್ತಿ ಹಾನಿಯಾಗಿದ್ದಕ್ಕೆ ನಿಗದಿತ ಸಮಯದೊಳಗೆ ಪರಿಹಾರ ಒದಗಿಸಬೇಕು, ಇಲ್ಲವಾದಲ್ಲಿ ಅವರ ಆಸ್ತಿ ವಶಪಡಿಸಿಕೊಳ್ಳುವುದಾಗಿ ಜಿಲ್ಲಾಡಳಿತ ಸೂಚಿಸಿತ್ತು.