ಅಲಹಾಬಾದ್:ಲಿವಿಂಗ್ ಟುಗೆದರ್ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿವಾಹಿತ ಮಹಿಳೆಯು ಇನ್ನೊಬ್ಬ ಪುರುಷನೊಂದಿಗೆ ವಾಸಿಸುತ್ತಿದ್ದರೆ, ಅದನ್ನು ಲಿವಿಂಗ್ ಟುಗೆದರ್ ಸಂಬಂಧವೆಂದು ಪರಿಗಣಿಸಲಾಗುವುದಿಲ್ಲ. ಅದು ಅಪರಾಧವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ವಿಚ್ಛೇದನ ಪಡೆಯದೆ ಮತ್ತೊಬ್ಬ ಪುರುಷನ ಜೊತೆಗಿನ ವಾಸ ಅಪರಾಧ: ಅಲಹಾಬಾದ್ ಹೈಕೋರ್ಟ್ - ಅಲಹಾಬಾದ್ ಹೈಕೋರ್ಟ್
ವಿವಾಹಿತ ಮಹಿಳೆಯು ಗಂಡನಿಂದ ವಿಚ್ಛೇದನ ಪಡೆಯದೆ ಇನ್ನೊಬ್ಬ ಪುರುಷನೊಂದಿಗೆ ವಾಸಿಸುತ್ತಿದ್ದರೆ, ಅದನ್ನು ಲಿವಿಂಗ್ ಟುಗೆದರ್ ಸಂಬಂಧವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು
ಹತ್ರಾಸ್ ನಿವಾಸಿಗಳಾದ ಆಶಾದೇವಿ ಮತ್ತು ಅರವಿಂದ್ ಅವರ ಅರ್ಜಿಯನ್ನು ವಜಾಗೊಳಿಸಿ, ನ್ಯಾಯಮೂರ್ತಿ ಕೇಶರ್ವಾನಿ ಮತ್ತು ಶ್ರೀವಾಸ್ತವ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಆಶಾದೇವಿಯವರು ಮಹೇಶ್ ಚಂದ್ರ ಎಂಬುವವರ ಪತ್ನಿಯಾಗಿದ್ದು, ಇವರಿಬ್ಬರ ನಡುವೆ ಯಾವುದೇ ವಿಚ್ಛೇದನವಾಗಿಲ್ಲ. ಆದರೆ ಆಶಾದೇವಿ ತನ್ನ ಗಂಡನನ್ನು ಬಿಟ್ಟು ಇನ್ನೊಬ್ಬ ಪುರುಷನೊಂದಿಗೆ ಬದುಕುತ್ತಿದ್ದಾರೆ. ಇದು ಲಿವಿಂಗ್ ಟುಗೆದರ್ ಸಂಬಂಧವಲ್ಲ, ಅಪರಾಧವಾಗಿದೆ ಎಂದು ಕೋರ್ಟ್ ಹೇಳಿದೆ.