ಪ್ರಯಾಗ್ರಾಜ್/ಉತ್ತರ ಪ್ರದೇಶ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿ ಆಲಿಯಾ ಪತಿ ಹಾಗೂ ಕುಟುಂಬದ ಮೂವರು ಸದಸ್ಯರ ವಿರುದ್ಧ ಸಲ್ಲಿಸಿದ್ದ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್ ನವಾಜುದ್ದೀನ್ ಸಿದ್ದಿಕಿ ಬಂಧನಕ್ಕೆ ಮಧ್ಯಂತರ ತಡೆ ನೀಡಿದೆ.
ಕಿರುಕುಳ ಪ್ರಕರಣ: ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಮೂವರು ಸಹೋದರರ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ - ನಟ ನವಾಜುದ್ದೀನ್ ಸಿದ್ದಿಕಿ ಬಂಧನಕ್ಕೆ ಕೋರ್ಟ್ ಮಧ್ಯಂತರ ತಡೆ
ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ ಪತಿ ಹಾಗೂ ಅವರ ನಾಲ್ವರು ಸಹೋದರರ ವಿರುದ್ಧ ಕಿರುಕುಳ ಆರೋಪ ಮಾಡಿ ಸಲ್ಲಿಸಿದ್ದ ಬಂಧನದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿ ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಮೂವರುಸಹೋದರರ ಬಂಧನಕ್ಕೆ ಮಧ್ಯಂತರ ತಡೆ ನೀಡಿದೆ.ನವಾಜುದ್ದೀನ್ ಅವರ ಪತ್ನಿ ಆಲಿಯಾ ಅವರು, ಅವರ ಸಹೋದರರು ಮತ್ತು ತಾಯಿ ತಮ್ಮ ಮೇಲೆ ಹಲ್ಲೆ ನಡೆಸಿ ಕುಟುಂಬದಲ್ಲಿ ಅಪ್ರಾಪ್ತ ಮಗುವಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದರು.
![ಕಿರುಕುಳ ಪ್ರಕರಣ: ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಮೂವರು ಸಹೋದರರ ಬಂಧನಕ್ಕೆ ಹೈಕೋರ್ಟ್ ಮಧ್ಯಂತರ ತಡೆ case](https://etvbharatimages.akamaized.net/etvbharat/prod-images/768-512-9312179-302-9312179-1603678331467.jpg)
ಆದರೆ ಮೂರನೇ ಸಹೋದರ ಮಿನಾಜುದ್ದೀನ್ ಕಾನೂನಿನ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಅರ್ಜಿಯನ್ನು ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಸಂಜಯ್ ಕುಮಾರ್ ಪಚೌರಿ ಅವರ ವಿಭಾಗೀಯ ಪೀಠವು ದೀರ್ಘ ವಿಚಾರಣೆ ನಡೆಸಿದೆ.
ನವಾಜುದ್ದೀನ್ ಸಿದ್ದಿಕಿ ಸಹೋದರರಾದ ಮಿನಾಜುದ್ದೀನ್ ಸಿದ್ದಿಕಿ, ಫಯಾಸುದ್ದೀನ್ ಸಿದ್ದಿಕಿ, ಅಯಾಜುದ್ದೀನ್ ಸಿದ್ದಿಕಿ, ಹಾಗೂ ತಾಯಿ ಮೆಹರುನ್ನೀಸಾ ಸಿದ್ದಿಕಿ ಈ ನಾಲ್ವರು ಮುಜಾಫರ್ನಗರದ ತಮ್ಮ ನಿವಾಸದಲ್ಲಿ ಅಪ್ರಾಪ್ತ ಮಗುವಿಗೆ ಹಿಂಸೆ ನೀಡಿದ್ದು, ನನ್ನ ಮೇಲೂ ಹಲ್ಲೆ ಮಾಡಿದ್ದಾರೆ. ಈ ಘಟನೆ ನಡೆದಾಗ ಪತಿ ನವಾಜ್ಸುದ್ದೀನ್ ಸಿದ್ದಿಕಿ ಮುಂಬೈನಲ್ಲಿದ್ರು. ಈ ಕುರಿತು ಅವರಿಗೆ ಮಾಹಿತಿ ನೀಡಿದರೂ ಕೂಡ ಅವರು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ ಎಂದು ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ ನವಾಜುದ್ದೀನ್ ವಿರುದ್ಧವೂ ದೂರಿನಲ್ಲಿ ಆರೋಪಿಸಿದ್ರು. ಜುಲೈ 27ರಂದು POCSO ಕಾಯ್ದೆಯಡಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಕೋರ್ಟ್ ಎ1 ಆರೋಪಿ ಮಿನಾಜುದ್ದೀನ್ ಸಿದ್ದಿಕಿ ಸಲ್ಲಿಸಿದ್ದ ಜಾಮೀನು ಅರ್ಜಿ,ನಿರೀಕ್ಷಿತ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
TAGGED:
Nawazuddin Siddiqui wife