ಕರ್ನಾಟಕ

karnataka

By

Published : Oct 21, 2020, 12:20 PM IST

ETV Bharat / bharat

ಭಯೋತ್ಪಾದಕರ ಮೂಲ ಮದರಸಾ: ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ವಿವಾದಿತ ಹೇಳಿಕೆ

ಮದರಸಾಗಳಲ್ಲಿರುವ ಶಿಕ್ಷಣ ವ್ಯವಸ್ಥೆ ವಿಚಾರವಾಗಿ ಮಧ್ಯಪ್ರದೇಶದ ಸಚಿವೆಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

Minister Usha Thakur
ಸಚಿವೆ ಉಷಾ ಠಾಕೂರ್

ಇಂದೋರ್ (ಮಧ್ಯಪ್ರದೇಶ):ಮದರಸಾಗಳು ಭಯೋತ್ಪಾದಕರ ಮೂಲವಾಗಿದ್ದು, ಎಲ್ಲಾ ಭಯೋತ್ಪಾದಕರು ಮದರಸಾಗಳಲ್ಲೇ ಬೆಳೆದಿದ್ದಾರೆ. ಅವರು ಜಮ್ಮು ಕಾಶ್ಮೀರವನ್ನು ಉಗ್ರರನ್ನು ತಯರಿಸುವ ಕಾರ್ಖಾನೆಯನ್ನಾಗಿ ಮಾಡಿದ್ದಾರೆ ಎಂದು ಮಧ್ಯಪ್ರದೇಶದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವೆ ಉಷಾ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಚಿವೆ ಉಷಾ ಠಾಕೂರ್

ಇಂದೋರ್​ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯತೆಯನ್ನು ಮದರಸಾಗಳು ಒಪ್ಪುವುದಿಲ್ಲ. ಅವುಗಳನ್ನು ಪ್ರಸ್ತುತವಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿಲೀನಗೊಳಿಸಬೇಕು. ಹೀಗಾದಾಗ ಮಾತ್ರ ಸಮಾಜಕ್ಕೆ ಒಳಿತಾಗುತ್ತದೆ ಎಂದಿದ್ದಾರೆ.

ಇದರ ಜೊತೆಗೆ ಎಲ್ಲಾ ಭಯೋತ್ಪಾದಕರು ಮದರಸಾಗಳಲ್ಲೇ ಓದಿದ್ದು, ಮದರಸಾಗಳು ಮಕ್ಕಳಿಗೆ ರಾಷ್ಟ್ರೀಯತೆಯ ಪಾಠ ಹೇಳಿಕೊಡುವಲ್ಲಿ ವಿಫಲವಾಗಿವೆ ಎಂದು ದೂರಿದ್ದಾರೆ.

ABOUT THE AUTHOR

...view details