ಕರ್ನಾಟಕ

karnataka

ETV Bharat / bharat

ಕೇಂದ್ರ ಸರ್ಕಾರ ಕೈಗೊಂಡ ಎಲ್ಲ ಕ್ರಮಗಳೂ ಕಾರ್ಮಿಕ ವಿರೋಧಿ: ದಿಗ್ವಿಜಯ ಸಿಂಗ್ - ಕೇಂದ್ರ ಬಿಜೆಪಿಸರ್ಕಾರ ಕೈಗೊಂಡ ಎಲ್ಲಾ ಕ್ರಮಗಳು ಕಾರ್ಮಿಕ ವಿರೋಧಿ ಎಂದ ಕಾಂಗ್ರೆಸ್

ಕೇಂದ್ರ ಬಿಜೆಪಿ ಸರ್ಕಾರ ಸಂಘದ ಸಿದ್ಧಾಂತ ಹೊಂದಿದ್ದು, ಅವರು ಕಾರ್ಮಿಕ ವಿರೋಧಿಗಳಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಹೇಳಿದರು.

digvijay singh
digvijay singh

By

Published : Aug 10, 2020, 1:26 PM IST

ಭೋಪಾಲ್ (ಮಧ್ಯಪ್ರದೇಶ):ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಖಂಡಿಸಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ಸಂಘದ ಸಿದ್ಧಾಂತ ಹೊಂದಿರುವ ಜನರು ಅಧಿಕಾರದಲ್ಲಿದ್ದು, ಅವರು ಕಾರ್ಮಿಕ ವಿರೋಧಿಗಳಾಗಿದ್ದಾರೆ ಎಂದು ಹೇಳಿದರು.

ಕೇಂದ್ರ ಶ್ರಮ ಸಂಗಥನ್​ನ ಸತ್ಯಾಗ್ರಹದಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್, "ಬಿಜೆಪಿ ಬಲಪಂಥೀಯರ ಸಿದ್ಧಾಂತವನ್ನು ಹೊಂದಿರುವ ಪಕ್ಷವಾಗಿದ್ದು, ಅದು ಕಾರ್ಮಿಕ ವಿರೋಧಿಯಾಗಿದೆ. 2014ರಿಂದ ಕೇಂದ್ರ ಸರ್ಕಾರ ಕೈಗೊಂಡ ಪ್ರತಿಯೊಂದು ನಿರ್ಧಾರವೂ ಕಾರ್ಮಿಕ ವಿರೋಧಿಯಾಗಿದೆ" ಎಂದು ಹೇಳಿದರು.

"ಸಾರ್ವಜನಿಕ ವಲಯಕ್ಕೆ ಯಾವುದೇ ತಾಂತ್ರಿಕ ಸಾಮರ್ಥ್ಯವಿಲ್ಲ ಎಂದು ತೋರಿಸಲು ಅವರು ಎಲ್ಲವನ್ನೂ ಖಾಸಗೀಕರಣಗೊಳಿಸಲು ಹೊರಟಿದ್ದಾರೆ" ಎಂದು ಅವರು ಹೇಳಿದರು.

ABOUT THE AUTHOR

...view details