ಕರ್ನಾಟಕ

karnataka

ETV Bharat / bharat

ವಿಶಾಖಾ ಸ್ಟೀಲ್ ಖಾಸಗೀಕರಣ ವಿರೋಧಿಸಿ ಸರ್ವ ಪಕ್ಷಗಳ ಆಂದೋಲನ

ರಾಜ್ಯ ಸರ್ಕಾರವು ಸ್ಟೀಲ್ ಕಂಪನಿ ಖಾಸಗೀಕರಣ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಬೇಕು. ಈ ಮೂಲಕ ರಾಜ್ಯವೇ ಕಂಪನಿ ನಡೆಸಲು ಮುಂದಾಗಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.

all-party-demonstration-held-in-vizag
ಸ್ಟೀಲ್ ಕಂಪನಿ ಖಾಸಗೀಕರಣ ವಿರೋಧಿಸಿ ಸರ್ವ ಪಕ್ಷಗಳ ಆಂದೋಲನ

By

Published : Feb 10, 2021, 3:41 PM IST

ವೈಜಾಗ್​​ (ಆಂಧ್ರಪ್ರದೇಶ): ಇಲ್ಲಿನ ಸಾರ್ವಜನಿಕ ವಲಯದ ವಿಶಾಖಾ ಸ್ಟೀಲ್ ಪ್ಲಾಂಟ್ ಅನ್ನು ಖಾಸಗೀಕರಣ ಮಾಡಲು ನಿರ್ಧರಿಸಿರುವ ಹಿನ್ನೆಲೆ ವಿರೋಧ ವ್ಯಕ್ತವಾಗುತ್ತಿದೆ. ಸ್ಟೀಲ್ ಪ್ಲಾಂಟ್​ ಅನ್ನು ಖಾಸಗೀಕರಣ ಮಾಡದಂತೆ ಎಲ್ಲಾ ಪಕ್ಷಗಳು ಪ್ರತಿಭಟನೆಗಿಳಿದಿವೆ.

ಕಾರ್ಮಿಕ ಸಂಘಟನೆಗಳು ಈ ಸ್ಟೀಲ್ ಕಂಪನಿಗಾಗಿ ಜೀವವನ್ನೇ ನೀಡುತ್ತೇವೆ ಎನ್ನುತ್ತಿದ್ದು, ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇದಲ್ಲದೆ ವೈಎಸ್​ಆರ್​​ಸಿಪಿ ನಾಯಕರು ಸಹ ಇದಕ್ಕೆ ಬೆಂಬಲ ಸೂಚಿಸಿದ್ದು, ಪ್ರತಿಕೂಲ ಸ್ಥಿತಿ ಎದುರಾದರೆ ರಾಜೀನಾಮೆಗೂ ಸಿದ್ದ ಎಂದಿದ್ದಾರೆ.

ಸ್ಟೀಲ್ ಕಂಪನಿ ಖಾಸಗೀಕರಣ ವಿರೋಧಿಸಿ ಸರ್ವ ಪಕ್ಷಗಳ ಆಂದೋಲನ

ವಿಶಾಖಪಟ್ಟಣಂನಲ್ಲಿ ಕಾರ್ಮಿಕರು ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಿದ್ದ ವೈಎಸ್​​​​ಆರ್​ಸಿಪಿ ಸಂಸದ ವಿಜಯಸಾಯ್ ರೆಡ್ಡಿ, ಸ್ಟೀಲ್ ಪ್ಲಾಂಟ್​ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಮೂಲಕ ಕಾರ್ಮಿಕರ ಜೊತೆ ನಿಲ್ಲುವುದಾಗಿ ತಿಳಿಸಿದರು. ಲಾಭದಲ್ಲಿರುವ ಕಂಪನಿಯನ್ನು ಪಿತೂರಿಯಿಂದ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಭೆಯಲ್ಲಿ ಸಚಿವ ಆವಂತಿ ಶ್ರೀನಿವಾಸ್, ಸಂಸದ ಎವಿವಿ ಸತ್ಯನಾರಾಯಣ, ಶಾಸಕ ಅಮರನಾಥ್ ಇತರರು ಭಾಗಿಯಾಗಿದ್ದರು.

ಇದಲ್ಲದೆ ರಾಜ್ಯ ಸರ್ಕಾರವು ಸ್ಟೀಲ್ ಕಂಪನಿ ಖಾಸಗೀಕರಣ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಬೇಕು. ಈ ಮೂಲಕ ರಾಜ್ಯವೇ ಕಂಪನಿ ನಡೆಸಲು ಮುಂದಾಗಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ಇದಕ್ಕಾಗಿ ಎಲ್ಲಾ ಪಕ್ಷದ ನಾಯಕರು, ಕಾರ್ಮಿಕ ಸಂಘಟನೆಗಳೂ ಒಗ್ಗಟ್ಟಾಗಬೇಕು ಎಂದು ಕಾರ್ಮಿಕ ಸಂಘಟನೆಗಳು ಮನವಿ ಮಾಡಿವೆ.

ಇದನ್ನೂ ಓದಿ:ಇ-ಟೆಂಡರ್ ಹಗರಣ: ಭೋಪಾಲ್, ಹೈದರಾಬಾದ್‌ನಲ್ಲಿ ಐಟಿ ದಾಳಿ

ABOUT THE AUTHOR

...view details