ನವದೆಹಲಿ:ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಸಲುವಾಗಿ ದೇಶದ ಎಲ್ಲ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹಾಟ್‌ಸ್ಪಾಟ್ ಜಿಲ್ಲೆಗಳು, ನಾನ್ ಹಾಟ್‌ಸ್ಪಾಟ್ ಜಿಲ್ಲೆಗಳು, ಹಸಿರು ವಲಯದ ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ತಿಳಿಸಿದ್ದಾರೆ.
ದೇಶದ ಎಲ್ಲ ಜಿಲ್ಲೆಗಳನ್ನ 3 ವಿಭಾಗಗಳಾಗಿ ವಿಂಗಡನೆ: ಆರೋಗ್ಯ ಇಲಾಖೆ ಘೋಷಣೆ
ಸುದ್ದಿಗೋಷ್ಠಿ ನಡೆಸಿ ಕೋವಿಡ್19 ತಡೆಗಟ್ಟಲು ಕೈಗೊಂಡಿರುವ ಕ್ರಮ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್, ದೇಶದ ಎಲ್ಲಾ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಕೋವಿಡ್-19 ತಡೆಗಟ್ಟಲು ಕೈಗೊಂಡಿರುವ ಕ್ರಮ ಬಗ್ಗೆ ಮಾಹಿತಿ ನೀಡಿದ ಅವರು, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಡಿಜಿಪಿಗಳು, ಆರೋಗ್ಯ ಇಲಾಖೆ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪುರಸಭೆ ಆಯುಕ್ತರೊಂದಿಗೆ ಕ್ಯಾಬಿನೆಟ್ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ, ಹಾಟ್‌ಸ್ಪಾಟ್‌ಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಜೊತೆಗೆ ಸ್ಥಳೀಯ ಮಟ್ಟದಲ್ಲಿ ಜಾರಿಗೊಳಿಸಬೇಕಾದ ಕಾರ್ಯಸೂಚಿಗಳನ್ನು ತಿಳಿಸಿರುವುದಾಗಿ ಅಗರ್‌ವಾಲ್ ಹೇಳಿದ್ದಾರೆ.
ಚೀನಾದ ಸಂಶೋಧನೆ ಪ್ರಕಾರ ಕೊರೊನಾ ವೈರಸ್ ಮೊದಲಿಗೆ ಬಾವಲಿಗಳಲ್ಲಿ ಕಂಡು ಬಂದಿದೆ. ಈ ಬಾವಲಿಗಳಿಂದ ಚಿಪ್ಪು ಹಂದಿಗಳಿಗೆ ಹರಡಿವೆ. ಇವುಗಳಿಂದ ಮಾನವನ ದೇಹಕ್ಕೆ ಹರಡಿರುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ ಆರ್.ಗಂಗಾಕೇಡ್ಕರ್ ತಿಳಿಸಿದ್ದಾರೆ. ಎರಡು ರೀತಿಯ ಬಾವಲಿಗಳಿವೆ. ಯಾವ ಬಾವಲಿಯಿಂದ ಕೋವಿಡ್19 ಹರಡಲು ಸಾಧ್ಯವಿಲ್ಲ ಎಂಬುದರ ಬಗ್ಗೆ ನಾವೂ ಕೂಡ ಪರೀಕ್ಷೆ ನಡೆಸಿದ್ದೇವೆ. ಇದು ತುಂಬಾ ಅಪರೂಪವಾಗಿದೆ. 1 ಸಾವಿರ ವರ್ಷದಲ್ಲಿ ಒಮ್ಮೆ ಬಾವಲಿಗಳಿಂದ ಮನುಷ್ಯನಿಗೆ ವೈರಸ್ ಹರಡಬಹುದು ಎಂದು ಅಂದಾಜಿಸಲಾಗಿದೆ ಎಂದು ಕೂಡ ಇದೇ ವೇಳೆ, ಅಗರ್‌ವಾಲ್ ಮಾಹಿತಿ ನೀಡಿದ್ದಾರೆ.