ನವದೆಹಲಿ:ಮಾರ್ಚ್ 22ರಂದು 'ಜನತಾ ಕರ್ಫ್ಯೂ'ಗೆ ಜನರು ಸಹಕರಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ಹಾವಳಿ ತೀವ್ರವಾಗಿದ್ದು, ಈ ಕುರಿತು ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ. ಮನೆಯಲ್ಲಿರುವ ವಯಸ್ಕರ ಬಗ್ಗೆ ಕಾಳಜಿ ವಹಿಸಿ ಯುದ್ಧದ ವೇಳೆ ಎಲ್ಲ ಗ್ರಾಮಗಳನ್ನು ಬಂದ್ ಮಾಡಲಾಗುತ್ತಿತ್ತು. ಅದೇ ರೀತಿ ಮಾರ್ಚ್ 22ರಂದು 'ಜನತಾ ಕರ್ಫ್ಯೂ'ಗೆ ದೇಶದ ಜನರು ಸಹಕಾರ ನೀಡಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.
ಜಗತ್ತನ್ನು ವ್ಯಾಪಿಸಿರುವ ಕೊರೊನಾ ವೈರಸ್ ನಿಗ್ರಹಿಸಲು ವೈದ್ಯರು ಹಾಗೂ ಮಾಧ್ಯಮ ಸಿಬ್ಬಂದಿ ಬಿಡುವಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಹಾವಳಿಯಿಂದ ಪ್ರಪಂಚದ ಜನರು ತತ್ತರಿಸಿದ್ದು, ಮನುಕುಲಕ್ಕೆ ಕಂಟಕ ಸೃಷ್ಟಿಸಿದೆ. ಭಾರತದ 130 ಕೋಟಿ ಇದರಿಂದ ಜನರಿಗೆ ಕಂಟಕ ಕಾಡುತ್ತಿದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನೂ ಜಾಗೃತನಾಗಿರೋದು ಅವಶ್ಯ ಎಂದಿದ್ದಾರೆ.
ಇದೇ ಭಾನುವಾರ ಜನತಾ ಕರ್ಫ್ಯೂ...
ಮಾರ್ಚ್ 22ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಜನತಾ ಕರ್ಫ್ಯೂ ಘೋಷಿಸಲಾಗಿದೆ. ವೈರಸ್ಗಳನ್ನು ತಡೆಗಟ್ಟಲು 'ಜನತಾ ಕರ್ಫ್ಯೂ' ಅತ್ಯಗತ್ಯ. ಈ ಸಂದರ್ಭದಲ್ಲಿ ಜನರು ಮನೆಯಲ್ಲಿಯೇ ಇರಿ. ಅಂದು ಮನೆಯಲ್ಲಿಯೇ ಇದ್ದು, ಕನಿಷ್ಠ 10 ಮಂದಿಗೆ ಅರಿವು ಮೂಡಿಸಿ. ಕರ್ಫ್ಯೂ ಸಂದರ್ಭದಲ್ಲಿ ನಿಮ್ಮ ನಿಮ್ಮ ಮನೆಗಳಿಂದ ಹೊರಬರಬೇಡಿ ಎಂದು ಮೋದಿ ಮನವಿ ಮಾಡಿದ್ದಾರೆ.
ಕೊರೊನಾ ವಿರುದ್ಧ ಹೋರಾಡಲು ಭಾರತ ಎಷ್ಟು ಸಮರ್ಥ ಇದೆ ಎಂದು ಸಾಬೀತುಪಡಿಸಿ. ದೈನಂದಿನ ಚೆಕಪ್ಗಳಿಗೆ ಆಸ್ಪತ್ರೆಗೆ ಹೋಗುವುದನ್ನು ಕಡಿಮೆ ಮಾಡಿ. ತೀರಾ ಅಗತ್ಯವಿದ್ದರೆ ಮಾತ್ರ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಕೊರೊನಾ ಹರಡದಂತೆ ವ್ಯಕ್ತಿಯಿಂದ ವ್ಯಕ್ತಿ ಅಂತರ ಕಾಯ್ದುಕೊಳ್ಳಬೇಕು. ನಮ್ಮ ಅಗತ್ಯ ಸೇವೆಗಳು, ಆಸ್ಪತ್ರೆಗಳ ಮೇಲೆ ಒತ್ತಡ ಹೇರಲೇಬೇಡಿ. ಎಂದು ಮೋದಿ ಹೇಳಿದ್ದಾರೆ.
ಇನ್ನು ಆ ದಿನ ಸಂಜೆ 5 ಗಂಟೆಗೆ ಚಪ್ಪಾಳೆ ಮೂಲಕ ಧನ್ಯವಾದ ಅರ್ಪಿಸೋಣ. ಕೊರೊನಾ ವಿರುದ್ಧ ಹೋರಾಡುವ ಸಿಬ್ಬಂದಿಗೆ ಥ್ಯಾಂಕ್ಸ್ ಹೇಳೋಣ ಎಂದು ಮೋದಿ ತಿಳಿಸಿದ್ದಾರೆ. ಮುಂದಿನ ಕೆಲವು ವಾರಗಳವರೆಗೆ 60 ವರ್ಷಕ್ಕಿಂತ ಮೇಲ್ಪಟ್ಟ ಜನರು ತಮ್ಮ ಮನೆಗಳಿಂದ ಹೊರಗೆ ಹೋಗದಂತೆ ಪ್ರಧಾನಿ ವಿನಂತಿಸಿದ್ದಾರೆ.
ಟಾಸ್ಕ್ ಫೋರ್ಸ್ ರಚನೆ...
ಹಣಕಾಸು ಸಚಿವರ ನೇತೃತ್ವದಲ್ಲಿ ಕೋವಿಡ್-19 ಟಾಸ್ಕ್ ಫೋರ್ಸ್ ರಚಿಸಲು ಸರ್ಕಾರ ನಿರ್ಧರಿಸಿದೆ. ಈ ಕಾರ್ಯಪಡೆ ಇದಕ್ಕೆ ಸಂಬಂಧಿಸಿದ ಎಲ್ಲ ಮಧ್ಯಸ್ಥಗಾರರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರುತ್ತದೆ. ಅವರ ಪ್ರತಿಕ್ರಿಯೆಯನ್ನು ತೆಗೆದುಕೊಂಡು ಅದಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಮೋದಿ ತಿಳಿಸಿದ್ದಾರೆ.
ಇಲ್ಲಿದೆ ಮೋದಿ ಭಾಷಣದ ಪ್ರಮುಖ ಅಂಶಗಳು...
- ಭಾನುವಾರ ಬೆಳಿಗ್ಗೆ 7ರಿಂದ 5ರವರೆಗೆ ಯಾರೂ ಮನೆಯಿಂದ ಹೊರಬರಬೇಡಿ.
- 60-65 ವರ್ಷಕ್ಕಿಂತ ಮೇಲ್ಪಟ್ಟವರಂತೂ ಮನೆಯಿಂದ ಹೊರ ಬರಲೇಬೇಡಿ
- ನಿಮ್ಮಲ್ಲಿ ಸಂಕಲ್ಪ ಹಾಗೂ ಸಂಯಮ ಇರಲಿ. ನೀವಾಗಿಯೇ ಕರ್ಫ್ಯೂ ಹೇರಿಕೊಳ್ಳಿ
- ಅಗತ್ಯ ವಸ್ತುಗಳನ್ನು ಶೇಖರಿಸಲು ಭೀತಿಯಿಂದ ಖರೀದಿಗೆ ಹೋಗಬೇಡಿ
- ದೇಶದಲ್ಲಿ ಅಗತ್ಯ ವಸ್ತುಗಳಿಗೂ ಯಾವುದೇ ಕೊರತೆಯುಂಟಾಗಿಲ್ಲ
- ಪ್ರತಿಯೊಬ್ಬರೂ ಸಾಧ್ಯವಾದರೆ ಕನಿಷ್ಠ 10 ಮಂದಿಗಾದರೂ ವೈರಸ್ ಬಗೆಗೆ ಜಾಗೃತಿ ಮೂಡಿಸಿ
- ಅಗತ್ಯ ಬಿದ್ದರೆ ಮಾತ್ರ ಆಸ್ಪತ್ರೆಗೆ ತೆರಳಿ, ನಿಯಮಿತ ಚೆಕ್ಅಪ್ ಮುಂದೂಡಿ.
- ಅನಿವಾರ್ಯವಲ್ಲದ ಸರ್ಜರಿಗಳನ್ನು ಮುಂದೂಡಿ.
- ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಮೇಲೆ ಒತ್ತಡ ಹೇರಬೇಡಿ
- ಕೊರೊನಾ ವೈರಸ್‌ಗೆ ಔಷಧವಿಲ್ಲ. ನೈಸರ್ಗಿಕ ಮಾದರಿಯಲ್ಲಿ ಅದನ್ನು ಹಿಮ್ಮೆಟ್ಟಿಸಬೇಕಿದೆ