ಕರ್ನಾಟಕ

karnataka

By

Published : Apr 11, 2020, 1:05 PM IST

Updated : Apr 11, 2020, 1:18 PM IST

ETV Bharat / bharat

ಮುಂದಿನ 15 ದಿನಗಳ ಕಾಲ ದೇಶದಲ್ಲಿ ಲಾಕ್​ಡೌನ್​ ಫಿಕ್ಸ್!

ಮಹಾಮಾರಿ ಕೊರೊನಾ ವೈರಸ್​ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಎಲ್ಲ ಸಿಎಂಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

PM Modi video confernece
PM Modi video confernece

ನವದೆಹಲಿ:ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್​ಡೌನ್ ಏಪ್ರಿಲ್​ 14ರಂದು ಮುಕ್ತಾಯಗೊಳ್ಳಲಿದ್ದು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸಿದರು.

ವಿಡಿಯೋ ಸಂವಾದದಲ್ಲಿ ಭಾಗಿಯಾದ ಬಳಿಕ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,​ ದೇಶದಲ್ಲಿ ಲಾಕ್​ಡೌನ್​ ವಿಸ್ತರಿಸುವಂತೆ ಎಲ್ಲ ಸಿಎಂಗಳು ಮನವಿ ಮಾಡಿದ್ದಾಗಿ ತಿಳಿಸಿದ್ರು.

ರಾಜ್ಯದಲ್ಲೂ ಏಪ್ರಿಲ್​ 30ವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡುವಂತೆ ತಿಳಿಸಿದ್ದೇವೆ. ಜತೆಗೆ ಯಾವುದೇ ಕಾರಣಕ್ಕೂ ಖಾಸಗಿ, ಸರ್ಕಾರಿ ಬಸ್​ಗಳ ಸೇವೆ ಸದ್ಯಕ್ಕೆ ಬೇಡ. ರೈಲ್ವೆ ಸಂಚಾರ ಆರಂಭ ಮಾಡದಂತೆ ತಿಳಿಸಲಾಗಿದ್ದು, ಜೊತೆಗೆ ಯಾವುದೇ ಕಾರಣಕ್ಕೂ ಲಾಕ್​ಡೌನ್​ ಹಿಂತೆಗೆದುಕೊಳ್ಳದಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ಮಾತನಾಡಿ, ಲಾಕ್​ಡೌನ್​ ವಿಸ್ತರಿಸಲು ಪ್ರಧಾನಿ ಒಲವು ತೋರಿದ್ದು, ಅದಕ್ಕೆ ಸಮ್ಮತಿ ಸೂಚಿಸಿದ್ದೇವೆ. ಕೈಗಾರಿಕೆ ಹಾಗೂ ಕೃಷಿ ವಲಯಕ್ಕೆ ಕೆಲವು ರಿಯಾಯತಿ ನೀಡಲು ತಿಳಿಸಿರುವುದಾಗಿ ಅವರು ಹೇಳಿದ್ರು.

ಪಂಜಾಬ್​ನಲ್ಲಿ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಉಳಿದಂತೆ ರಾಜಸ್ಥಾನ, ಒಡಿಶಾದಲ್ಲೂ ಲಾಕ್​ಡೌನ್​ ಈಗಾಗಲೇ ವಿಸ್ತರಣೆಗೊಂಡಿದೆ. ಆದರೆ ರೈತರ ಹಿತದೃಷ್ಟಿಯಿಂದ ಕೆಲವು ರಾಜ್ಯಗಳು ಲಾಕ್​ಡೌನ್​ ವಿಸ್ತರಿಸಲು ಹಿಂದೇಟು ಹಾಕುತ್ತಿದ್ದು ರಿಯಾಯತಿ ನೀಡುವಂತೆ ಒತ್ತಾಯಿಸಿವೆ.

Last Updated : Apr 11, 2020, 1:18 PM IST

ABOUT THE AUTHOR

...view details