ಕರ್ನಾಟಕ

karnataka

ETV Bharat / bharat

ತುರ್ತು ಪ್ರಕರಣಗಳ ವಿಚಾರಣೆಗೆ ಎಲ್ಲ ಪೀಠಗಳ ಲಭ್ಯತೆ  ಕಡ್ಡಾಯ: ಹೈಕೋರ್ಟ್​​​​​​​ - urgent matters via video conferencing

ಲಾಕ್​​​ಡೌನ್​ ಜಾರಿಯಾದಾಗಿನಿಂದ ಇಲ್ಲಿಯವರೆಗೂ 7 ವಿಭಾಗೀಯ ಪೀಠಗಳ ಪೈಕಿ ಎರಡು ವಿಭಾಗದ ಪೀಠಗಳು ಮತ್ತು 19ರ ಪೈಕಿ ಹತ್ತು ಏಕ - ವಿಭಾಗೀಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸುತ್ತಿವೆ.

All benches of Delhi HC to take up urgent matters via video conferencing from May 22
ದೆಹಲಿ ಹೈಕೋರ್ಟ್​​

By

Published : May 21, 2020, 5:36 PM IST

ನವದೆಹಲಿ:ಮೇ​ 22 ರಿಂದ (ಶುಕ್ರವಾರ) ವಿಡಿಯೋ ಕಾನ್ಫರೆನ್ಸ್​​​​ ಮೂಲಕ 'ಎಲ್ಲ ರೀತಿಯತುರ್ತು ಪ್ರಕರಣ'ಗಳ ವಿಚಾರಣೆಗೆ ಎಲ್ಲ ನ್ಯಾಯಮೂರ್ತಿಗಳು ಹಾಜರಿರಲು ದೆಹಲಿ ಹೈಕೋರ್ಟ್​ ಸೂಚಿಸಿದೆ.

ಮಾರ್ಚ್​​​​​​ 24 ರಿಂದ ಮೇ 19 ರವರೆಗೂ ಕೊರೊನಾ ಸಂಬಂಧಿಸಿದ ಲಾಕ್​​ಡೌನ್​ ಸಮಯದಲ್ಲಿ ಹೈಕೋರ್ಟ್​​​ ಮತ್ತು ಕೆಳ ನ್ಯಾಯಾಲಯಗಳು 20,726 ತುರ್ತು ಪ್ರಕರಣಗಳನ್ನು ಕೈಗೆತ್ತಿಕೊಂಡಿವೆ.

ಕೊರೊನಾ ಲಾಕ್​ಡೌನ್​ ಆರಂಭವಾದಾಗಿನಿಂದ ಈವರೆಗೂ ಎರಡು ವಿಭಾಗದ ಪೀಠಗಳು ಮತ್ತು ಹತ್ತು ಏಕ - ನ್ಯಾಯಮೂರ್ತಿಗಳ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದವು. ಈ ಪೀಠಗಳ ಜಡ್ಜ್​​​​​ಗಳು ರೊಟೇಷನ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಹೈಕೋರ್ಟ್​​​​ನಲ್ಲಿ ಪ್ರಸ್ತುತ ಏಳು ವಿಭಾಗೀಯ ಪೀಠ ಮತ್ತು 19 ಏಕ-ವಿಭಾಗೀಯ ಪೀಠಗಳಿವೆ.

ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ದೆಹಲಿಯ ಹೈಕೋರ್ಟ್‌ನ ಇತರ ನ್ಯಾಯಮೂರ್ತಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಮೇ 22ರಿಂದ ಎಲ್ಲ ವಿಭಾಗೀಯ ಪೀಠಗಳು ಮತ್ತು ಎಲ್ಲಾ ಏಕ - ನ್ಯಾಯಾಮೂರ್ತಿಗಳ ಪೀಠಗಳು ಎಲ್ಲ ರೀತಿಯ ತುರ್ತು ಪ್ರಕರಣಗಳನ್ನು ವಿಚಾರಣೆ ನಡೆಸಲಿವೆ. ಈ ಕುರಿತು ಹೈಕೋರ್ಟ್​​ ರಿಜಿಸ್ಟ್ರಾರ್​​​​​ ಜನರಲ್​ ಮನೋಜ್​ ಜೈನ್​ ಆದೇಶ ಹೊರಡಿಸಿದ್ದಾರೆ.

ಕೊನೆಯ ಹಂತದ ವಿಚಾರಣೆ ಪ್ರಕರಣಗಳನ್ನು ಮತ್ತು ಲಿಖಿತ ದೂರುಗಳನ್ನು ಶೀಘ್ರ ವಿಲೇವಾರಿ ಮಾಡಲು ಎರಡೂ ವಿಭಾಗೀಯ ಪೀಠದಿಂದ ಒಪ್ಪಿಗೆ ಸಿಕ್ಕಿದೆ.

ABOUT THE AUTHOR

...view details