ಕರ್ನಾಟಕ

karnataka

ETV Bharat / bharat

ಕೈಕೊಟ್ಟ 22 ರೈಫಲ್ಸ್... ಮಾಜಿ ಸಿಎಂ ಅಂತಿಮ ಸಂಸ್ಕಾರದಲ್ಲಿ ಮಹಾಲೋಪ​​ - ರೈಫಲ್​ ದೋಷ

ಸಕಲ ಸರ್ಕಾರಿ ಗೌರವದೊದಿಗೆ ಪೊಲೀಸ್ ಅಧಿಕಾರಿಗಳು 22 ರೈಫಲ್​​ಗಳ ಮೂಲಕ ಒಂದು ಸುತ್ತಿನ ಗುಂಡು ಹಾರಿಸಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ಅನುಸರಿಸಲಾಗಿದೆ. ಆದರೆ 22 ರೈಫಲ್​ನಿಂದಲೂ ಗುಂಡು ಹಾರಲೇ ಇಲ್ಲ.

ಮಾಜಿ ಸಿಎಂ ಅಂತಿಮ ಸಂಸ್ಕಾರ

By

Published : Aug 22, 2019, 12:19 PM IST

ಸೌಪಾಲ್​(ಬಿಹಾರ):ಆಗಸ್ಟ್ 19ರಂದು ನಿಧನರಾಗಿದ್ದ ಬಿಹಾರದ ಮಾಜಿ ಸಿಎಂ ಜಗನ್ನಾಥ್ ಮಿಶ್ರಾರ ಅಂತಿಮ ಕಾರ್ಯ ಇಂದು ನಡೆದಿದೆ. ಆದರೆ ಸಕಲ ಸರ್ಕಾರಿ ಗೌರವ ಸಲ್ಲಿಕೆ ವೇಳೆ ನಡೆದ ಲೋಪವೊಂದು ಹೈಲೈಟ್ ಆಗಿತ್ತು.

ಸಕಲ ಸರ್ಕಾರಿ ಗೌರವದಂತೆ ಪೊಲೀಸ್ ಅಧಿಕಾರಿಗಳು 22 ರೈಫಲ್​​ಗಳ ಮೂಲಕ ಒಂದು ಸುತ್ತಿನ ಗುಂಡು ಹಾರಿಸಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ಅನುಸರಿಸಲಾಯಿತು. ಆದರೆ 22 ರೈಫಲ್​ನಿಂದಲೂ ಗುಂಡು ಹಾರಲೇ ಇಲ್ಲ. ರೈಫಲ್​ ದೋಷ ಗಮನಕ್ಕೆ ಬಂದ ತಕ್ಷಣ ಪೊಲೀಸ್ ಅಧಿಕಾರಿಗಳು ರೈಫಲ್​ ಪರೀಕ್ಷಿಸಿದ್ದಾರೆ. ಆದರೆ ಇದಾವುದೂ ಸಫಲವಾಗಲಿಲ್ಲ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್​ಜೆಡಿ ಶಾಸಕ ಪಿಪ್ರಾ ಯದುವಂಶ ಕುಮಾರ್ ಯಾದವ್, ಈ ಘಟನೆ ಮಾಜಿ ಸಿಎಂಗೆ ಮಾಡಿದ ಅವಮಾನ ಎಂದಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾರ ಅಂತ್ಯಸಂಸ್ಕಾರ ಅವರ ಪೂರ್ವಜರ ಸ್ಥಳವಾದ ಸೌಪಾಲ್ ಜಿಲ್ಲೆಯಲ್ಲಿ ನಡೆದಿದೆ. ಅಂತಿಮ ಸಂಸ್ಕಾರದಲ್ಲಿ ಹಾಲಿ ಸಿಎಂ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಆರೋಗ್ಯ ಸಚಿವ ಮಂಗಲ್ ಪಾಂಡೆ ಭಾಗಿಯಾಗಿದ್ದರು.​

ABOUT THE AUTHOR

...view details