ಕರ್ನಾಟಕ

karnataka

ETV Bharat / bharat

ಜಿಯೋ ಗ್ರಾಹಕರಿಗೆ ಶಾಕ್​​​​... ಪ್ರತಿ ನಿಮಿಷದ ಕರೆಗೆ ಇನ್ಮುಂದೆ __ ದರ ನಿಗದಿ!

ಇಷ್ಟು ದಿನ ಫ್ರೀಯಾಗಿ ಕಾಲ್​​​ ಮಾಡುತ್ತಿದ್ದ ಗ್ರಾಹಕರಿಗೆ ಇದೀಗ ಶಾಕ್​ ನೀಡಲು ರಿಲಿಯನ್ಸ್​​​ ಜಿಯೋ ಕಂಪನಿ ಮುಂದಾಗಿದ್ದು, ಇನ್ಮುಂದೆ ಪ್ರತಿ ಕರೆಗೂ ಗ್ರಾಹಕರು ಹಣ ಸಂದಾಯ ಮಾಡಬೇಕಾಗುತ್ತದೆ.

By

Published : Oct 9, 2019, 5:50 PM IST

ರಿಲಯನ್ಸ್​ ಜಿಯೋ/ Jio users

ಮುಂಬೈ:ಟೆಲಿಕಾಂ ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳಿಗೆ ಭರ್ಜರಿಯಾಗಿ ಟಾಂಗ್​ ನೀಡಿ, ಕೋಟ್ಯಂತರ ಗ್ರಾಹಕರನ್ನು ಹೊಂದಿರುವ ರಿಲಯನ್ಸ್​ ಜಿಯೋ ಇದೀಗ ಗ್ರಾಹಕರಿಗೆ ಸ್ವಲ್ಪ ಮಟ್ಟದ ಶಾಕ್​ ನೀಡಲು ಮುಂದಾಗಿದೆ.

ಇಷ್ಟು ದಿನ ಜಿಯೋ ಟು ಜಿಯೋ ಹಾಗೂ ಇತರೆ ನೆಟವರ್ಕ್​ಗಳಿಗೆ ಕರೆ ಮಾಡುವಾಗ ಗ್ರಾಹಕರು ಯಾವುದೇ ರೀತಿಯ ಹಣ ಸಂದಾಯ ಮಾಡಬೇಕಾಗಿರಲಿಲ್ಲ. ಕೇವಲ ಕೆಲವೊಂದು ಪ್ಯಾಕ್​ ರಿಚಾರ್ಜ್​ ಮಾಡಿಸಿಕೊಂಡು ಅದರಿಂದಲೇ ಅನಿಯಮಿತ ಕರೆ ಮಾಡುತ್ತಿದ್ದರು. ಆದರೆ ಟ್ರಾಯ್​ ರಿಲಯನ್ಸ್​ ಕಂಪನಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ಐಯುಸಿ ದರ ನಿಗದಿ ಮಾಡಿದ್ದು, ಇನ್ಮುಂದೆ ಅದನ್ನು ಗ್ರಾಹಕರೇ ಕಟ್ಟಬೇಕಾಗುತ್ತದೆ.

ಜಿಯೋ ಮೊಬೈಲ್​ ಸಿಮ್​ ಹೊಂದಿರುವ ಗ್ರಾಹಕ ಬೇರೆ ಕಂಪನಿ ಮೊಬೈಲ್​ ನಂಬರ್​ಗೆ ಕಾಲ್​​ ಮಾಡುವಾಗ ಕಂಪನಿಗಳ ನಡುವಿನ ಕರೆಗೆ ನಿರ್ದಿಷ್ಟ ಶುಲ್ಕವನ್ನ ಮೊಬೈಲ್​ ಸಂಸ್ಥೆ ಪಾವತಿ ಮಾಡಬೇಕಾಗುತ್ತದೆ. ಜಿಯೋ ಗ್ರಾಹಕನು ಏರ್​ಟೆಲ್ ಸಂಖ್ಯೆಗೆ ಕರೆ ಮಾಡಿದರೆ ಈ ಕರೆ ಕನೆಕ್ಟ್ ಆಗಲು ಜಿಯೋ, ಏರ್​​ಟೆಲ್​​ಗೆ ನಿರ್ದಿಷ್ಚ ಶುಲ್ಕ ನೀಡಬೇಕು. ಕಳೆದ ಮೂರು ವರ್ಷಗಳಲ್ಲಿ ರಿಲಯನ್ಸ್​ ಜಿಯೋ ಸುಮಾರು 13,500 ಕೋಟಿ ರೂ. ಎನ್​ಇಟಿ ಐಯುಸಿ ಹಣ ಸಂದಾಯ ಮಾಡಿದೆ. ಆದರೆ ಜಿಯೋ ಟು ಜಿಯೋ ಕರೆಗೆ ಯಾವುದೇ ರೀತಿಯ ಶುಲ್ಕ ಹಾಕದಿರಲು ಕಂಪನಿ ನಿರ್ಧಾರ ಮಾಡಿದೆ.

ಏರ್​ಟೆಲ್​​​, ವೋಡಾಪೋನ್​-ಐಡಿಯಾ ಪ್ರತಿದಿನ ಜಿಯೋ ಗ್ರಾಹಕರಿಗೆ 25ರಿಂದ 30 ಕೋಟಿ ಮಿಸ್ಡ್​ ಕಾಲ್​​ ನೀಡಿದ್ದು, ಮರಳಿ ಕಾಲ್​​ ಮಾಡಿದ್ದರಿಂದ ಜಿಯೋ ಪ್ರತಿ ಕರೆಗೂ ನಿಮಿಷಕ್ಕೆ 6 ಪೈಸೆ ಹಣ ಸಂದಾಯ ಮಾಡಿದೆ. ಇದೀಗ ಅದರಿಂದ ಹೊರ ಬರಲು ರಿಲಯನ್ಸ್​ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details