ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಮಿತಿಮೀರಿದ ಉಗ್ರರ ಉಪಟಳ... ಅಮರನಾಥ ಯಾತ್ರೆಯ ಮೇಲೆ ಕರಿಛಾಯೆ..! - ಕಣಿವೆ ರಾಜ್ಯ

ಜೈಷೆ ಉಗ್ರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಯಾತ್ರಿಕರ ಬಸ್​ ಹಾಗೂ ಭದ್ರತಾ ಪಡೆ ವಾಹನವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯನ್ನು ಮೂಲಗಳು ತಿಳಿಸಿವೆ.

ಉಗ್ರರ ಉಪಟಳ

By

Published : Jun 28, 2019, 1:00 PM IST

ಶ್ರೀನಗರ:ಕಣಿವೆ ರಾಜ್ಯದಲ್ಲಿ ಉಗ್ರರ ಉಪಟಳ ಮಿತಿಮೀರಿದ್ದು ಇದೇ ಭಯ ಇನ್ನೆರಡು ದಿನದಲ್ಲಿ ಆರಂಭವಾಗಲಿರುವ ಅಮರನಾಥ ಯಾತ್ರೆಯ ಮೇಲೂ ಆವರಿಸಿದೆ.

ಜೂನ್​​ 30ರಿಂದ ಆರಂಭವಾಗಲಿರುವ ಅಮರನಾಥಾ ಯಾತ್ರೆಯ ವಾಹನದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಜೈಷೆ ಉಗ್ರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಯಾತ್ರಿಕರ ಬಸ್​ ಹಾಗೂ ಭದ್ರತಾ ಪಡೆ ವಾಹನವನ್ನು ಗುರಿಯಾಗಿಸಿ ದಾಳಿ ನಡೆಯುವ ಸಾಧ್ಯತೆಯನ್ನು ಮೂಲಗಳು ತಿಳಿಸಿವೆ.

ಅಮರನಾಥ ಯಾತ್ರೆಯ ಮೊದಲ ಬ್ಯಾಚ್​​ ಜೂನ್​ 30ರಂದು ಜಮ್ಮುನಿಂದ ಹೊರಡಲಿದ್ದು, ಬಸ್​ ಸಾಗುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ABOUT THE AUTHOR

...view details