ಕರ್ನಾಟಕ

karnataka

ETV Bharat / bharat

ಚೆನಾಬ್​ ನದಿ ತೀರದ ಜನತೆಗೆ ಮುನ್ನೆಚ್ಚರಿಕೆ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸಲಾಲ್​ ವಿದ್ಯುತ್​ ಕೇಂದ್ರದ ಸೂಚನೆ

ಜಮ್ಮು- ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿನ ಸಲಾಲ್​​ ಜಲಾಶಯದ ಗೇಟ್​ಗಳನ್ನು ತೆರೆಯಲು ನಿರ್ಧರಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ಜನತೆಗೆ ಸ್ಥಳಾಂತರಗೊಳ್ಳಲು ಸಲಾಲ್​ ವಿದ್ಯುತ್​ ಕೇಂದ್ರದ ಅಧಿಕಾರಿಗಳು ಸೂಚಿಸಿದ್ದಾರೆ.

By

Published : Aug 20, 2020, 2:31 PM IST

Salal Dam
ಸಲಾಲ್​​ ಜಲಾಶಯ

ರಿಯಾಸಿ (ಜಮ್ಮು ಮತ್ತು ಕಾಶ್ಮೀರ): ಜಿಲ್ಲೆಯಲ್ಲಿನ ಚೆನಾಬ್​​ ನದಿ ತೀರದಲ್ಲಿ ವಾಸಿಸುತ್ತಿರುವ ಜನರಿಗೆ ತಮ್ಮ ಸ್ಥಳದಿಂದ ದೂರವಿರಲು ಸಲಾಲ್ ವಿದ್ಯುತ್ ಕೇಂದ್ರ ಎಚ್ಚರಿಕೆ ನೀಡಿದೆ.

ಆಗಸ್ಟ್ 22 ರಂದು ಬೆಳಗ್ಗೆ 5:45 ರಿಂದ ಸಂಜೆ 6: 30 ರವರೆಗೆ ಸಲಾಲ್​​ ಅಣೆಕಟ್ಟೆಯ ಗೇಟ್​​ಗಳನ್ನು ತೆರೆಯಲು ನಿರ್ಧರಿಸಿದ್ದು, ನದಿ ತೀರದ ಜನರಿಗೆ ಯಾವುದೇ ಹಾನಿ ಉಂಟಾಗಬಾರದು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಗೊಳ್ಳಲು ಎಚ್ಚರಿಕೆ ನೀಡಲಾಗಿದೆ. ಜಲಾಶಯದ ಗೇಟ್​ಗಳನ್ನು ತೆರೆದಾಗ ನೀರಿನೊಂದಿಗೆ ಹೂಳು ಸಹ ಹರಿಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಿಗೆ ಹಾನಿ ಉಂಟಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಸೂಚನೆ ನೀಡಲಾಗಿದೆ.

ಬೆಳಗ್ಗೆಯಿಂದ ಸಂಜೆಯವರೆಗೆ ಅಣೆಕಟ್ಟೆ ಗೇಟ್​ಗಳನ್ನು ತೆರೆಯುವುದರಿಂದ ಜಲಾಶಯದ ಕೆಳಭಾಗದಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಬಾರದು ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ಈ ಸೂಚನೆ ನೀಡಲಾಗಿದೆ ಎಂದು ಸಲಾಲ್ ವಿದ್ಯುತ್ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details