ಲಂಡನ್: ಬೆಂಗಳೂರಿನ ಎನ್ಜಿಒ ಸಂಸ್ಥೆ ನಡೆಸುತ್ತಿರುವ 'ಅಕ್ಷಯ ಪಾತ್ರೆ' ಲಾಭರಹಿತ ಸೇವೆಗೆ, ಬಿಬಿಸಿ ವರ್ಲ್ಡ್ ಸರ್ವಿಸ್ ಗ್ಲೋಬಲ್ ಚಾಂಪಿಯನ್ ಪ್ರಶಸ್ತಿ ದೊರೆತಿದೆ.
ರಾಜ್ಯದ 'ಅಕ್ಷಯ ಪಾತ್ರೆ ಫೌಂಡೇಷನ್'ಗೆ ಬಿಬಿಸಿ ಗ್ಲೋಬಲ್ ಚಾಂಪಿಯನ್ ಅವಾರ್ಡ್ - undefined
ಲಾಭರಹಿತ 'ಅಕ್ಷಯ ಪಾತ್ರೆ' ಸೇವೆಗೆ ಬಿಬಿಸಿ ವರ್ಲ್ಡ್ ಸರ್ವಿಸ್ ಗ್ಲೋಬಲ್ ಚಾಂಪಿಯನ್ ಪ್ರಶಸ್ತಿ ದೊರೆತಿದೆ.

ಅಕ್ಷಯ ಪಾತ್ರೆ ಫೌಂಡೇಷನ್
ಈ ಅಕ್ಷಯ ಪಾತ್ರೆ ಯೋಜನೆ ಲಾಭ ರಹಿತವಾಗಿದ್ದು, ಶಾಲಾ ಮಕ್ಕಳಿಗೆ ಮಧ್ಯಾಹ್ನ ಸಮಯದಲ್ಲಿ ಬಿಸಿ ಊಟ ಒದಗಿಸಿಸಲಾಗುತ್ತಿದೆ. ಇಂಗ್ಲೆಂಡಿನ ಬ್ರಿಸ್ಟಲ್ನಲ್ಲಿ ಬಿಬಿಸಿ ಆಯೋಜಿಸಿದ್ದ 'ಫುಡ್ ಅಂಡ್ ಫಾರ್ಮಿಂಗ್ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಹಸಿವಿನಿಂದ ಮಕ್ಕಳು ಶಾಲೆಯನ್ನ ಬಿಡಬಾರದು ಎಂಬ ಕಾರಣದಿಂದ ಇಸ್ಕಾನ್ ಸಂಸ್ಥೆ ಅಕ್ಷಯ ಪಾತ್ರೆ ಫೌಂಡೇಷನ್ ಪ್ರಾರಂಭಿಸಿ ಉಚಿತವಾಗಿ ಮಕ್ಕಳಿಗೆ ಆಹಾರ ಒದಗಿಸುವ ಕಾರ್ಯ ಮಾಡುತ್ತಿದೆ.