ಕರ್ನಾಟಕ

karnataka

ETV Bharat / bharat

ರಾಜಕೀಯ ನನ್ನ ಅಜೆಂಡಾ ಅಲ್ಲ... ಪಾಲಿಟಿಕ್ಸ್ ಪ್ರವೇಶ ಮಾಡಲ್ಲ ಎಂದ  ಬಾಲಿವುಡ್ ನಟ - ಅಕ್ಷಯ್​ ಕುಮಾರ್​

ಅಕ್ಷಯ್ ಕುಮಾರ್ ಅಮೃತ್​ಸರ್​​ ಕ್ಷೇತ್ರದಿಂದ ಬಿಜೆಪಿ ಪರವಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದರ ಜೊತೆಗೆ ಮೋದಿ ಟ್ವಿಟರ್​​ನಲ್ಲಿ ಬಾಲಿವುಡ್​ ಕಲಾವಿದರಿಗೆ ಮತದಾನದಲ್ಲಿ ಆಯಾ ನಟರ ಅಭಿಮಾನಿಗಳು ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದು ಟ್ವೀಟ್ ಮಾಡಿದ್ದರು.

ನಟ ಅಕ್ಷಯ್​ ಕುಮಾರ್

By

Published : Mar 19, 2019, 1:13 PM IST

ನವದೆಹಲಿ: ಬಾಲಿವುಡ್ ನಟ ಅಕ್ಷಯ್​ ಕುಮಾರ್​ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ನಡೆಸಲಿದ್ದಾರೆ ಎನ್ನುವ ಸುದ್ದಿಯನ್ನು ಸ್ವತಃ ನಟ ಅಕ್ಷಯ್ ಕುಮಾರ್ ತಳ್ಳಿ ಹಾಕಿದ್ದಾರೆ.

ಸೋಮವಾರದಂದು ಪತ್ರಿಕಾಗೋಷ್ಠಿ ವೇಳೆ ರಾಜಕೀಯ ಪ್ರವೇಶ ಮಾಡುತ್ತೀರಾ ಎಂದು ಅಕ್ಕಿಯನ್ನು ಕೇಳಿದಾಗ, "ನಾನು ಯಾವುದೇ ರೀತಿಯ ಚುನಾವಣೆ ಸ್ಪರ್ಧೆ ನಡೆಸುವುದಿಲ್ಲ. ರಾಜಕೀಯ ನನ್ನ ಅಜೆಂಡಾ ಅಲ್ಲ. ಸದ್ಯ ನಾನು ಸಿನಿಮಾದ ಮೂಲಕ ಮಾಡುತ್ತಿರುವ ಕಾರ್ಯವನ್ನು ರಾಜಕೀಯದಲ್ಲಿ ಮಾಡಲು ಅಸಾಧ್ಯ ಎಂದುಕೊಂಡಿದ್ದೇನೆ" ಎಂದು ಅಕ್ಷಯ್ ಉತ್ತರಿಸಿದ್ದಾರೆ.

ಅಕ್ಷಯ್ ಕುಮಾರ್ ಅಮೃತ್​ಸರ್​​ ಕ್ಷೇತ್ರದಿಂದ ಬಿಜೆಪಿ ಪರವಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದರ ಜೊತೆಗೆ ಮೋದಿ ಟ್ವಿಟರ್​​ನಲ್ಲಿ ಬಾಲಿವುಡ್​ ಕಲಾವಿದರಿಗೆ ಮತದಾನದಲ್ಲಿ ಆಯಾ ನಟರ ಅಭಿಮಾನಿಗಳು ಪಾಲ್ಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದು ಟ್ವೀಟ್ ಮಾಡಿದ್ದರು.

ಉತ್ತಮವಾಗಿ ಹೇಳಿದ್ದೀರಾ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಮತದಾನದಲ್ಲಿ ಭಾಗವಹಿಸಿದಾಗ ಮಾತ್ರವೇ ಪ್ರಜಾಪ್ರಭುತ್ವದ ಹಬ್ಬ ಸಾರ್ಥಕವಾಗಲು ಸಾಧ್ಯ ಎಂದು ಮೋದಿ ಟ್ವೀಟ್​ಗೆ ಅಕ್ಷಯ್ ಪ್ರತಿಕ್ರಿಯಿಸಿದ್ದರು.

ABOUT THE AUTHOR

...view details