ಜೈಸಲ್ಮೇರ್(ರಾಜಸ್ಥಾನ):ಸೇನಾ ದಿನಾಚರಣೆ ಪ್ರಯುಕ್ತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕೃತಿ ಸೆನನ್ ಇಬ್ಬರೂ ಸೇನಾ ಸಿಬ್ಬಂದಿ ಜೊತೆಗೆ ಜೈಸಲ್ಮೇರ್‌ನ ಮಿಲಿಟರಿ ನಿಲ್ದಾಣಕ್ಕೆ ತಲುಪಿದರು. ಮತ್ತು 1971 ರ ಇಂಡೋ-ಪಾಕ್ ಯುದ್ಧದ ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆ ಸೇನೆಯು ಆಯೋಜಿಸಿದ್ದ ವಿಜಯ್ ರನ್ ಫಾರ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಸಂದರ್ಭ ಅಕ್ಷಯ್ ಕುಮಾರ್ ಮತ್ತು ಕೃತಿ ಸೆನನ್ ಸೈನಿಕರೊಂದಿಗೆ ಸಂವಾದ ನಡೆಸಿದರು. ಆನಂತರ ಸೇನಾ ನಿಲ್ದಾಣದ ಸಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ 'ವಿಜಯ್ ರನ್ ಫಾರ್ ಸೋಲ್ಜರ್ ಮ್ಯಾರಥಾನ್' ಗೆ ಚಾಲನೆ ನೀಡಿದರು.