ಕರ್ನಾಟಕ

karnataka

ETV Bharat / bharat

ಕೋವಿಡ್​ ಲಸಿಕೆ ವಿಚಾರವಾಗಿ ನನ್ನ ಪ್ರಶ್ನೆ ಬಿಜೆಪಿಗೆ ಹೊರತು ವಿಜ್ಞಾನಿಗಳಿಗಲ್ಲ: ಅಖಿಲೇಶ್​ ಯಾದವ್​​ - ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್

ಬಿಜೆಪಿಯಿಂದ ನೀಡಲಾಗುತ್ತಿರುವ ಲಸಿಕೆಯನ್ನು ನಾನು ಹೇಗೆ ನಂಬಲಿ? ಇದನ್ನು ನಾವು ಪಡೆಯಲು ಸಾಧ್ಯವಿಲ್ಲ. 2022ರ ಚುನಾವಣೆಯ ನಂತರ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗಲಿದೆ ಎಂದು ಯಾದವ್ ಹೇಳಿಕೆ ನೀಡಿದ್ದರು.

Akhilesh Yadav
Akhilesh Yadav

By

Published : Jan 4, 2021, 5:40 PM IST

ಲಕ್ನೋ: (ಉತ್ತರ ಪ್ರದೇಶ):ದೇಶದಲ್ಲಿ ವಿತರಿಸಲಾಗುವ ಕೋವಿಡ್-19 ಲಸಿಕೆಗಳನ್ನು 'ಬಿಜೆಪಿಯ ಲಸಿಕೆ' ಎಂದು ಹೇಳಿ ವಿವಾದಕ್ಕೊಳಗಾಗಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಕೋವಿಡ್​ ಲಸಿಕೆ ವಿಚಾರವಾಗಿ ನಾನು ಪ್ರಶ್ನೆ ಮಾಡಿರುವುದು ಬಿಜೆಪಿಗೆ ಹೊರತು ವಿಜ್ಞಾನಿಗಳಿಗಲ್ಲ ಎಂದು ಹೇಳಿಕೆ ನೀಡಿರುವ ಅಖಿಲೇಶ್ ಯಾದವ್​, ನಾನು ಅಥವಾ ಸಮಾಜವಾದಿ ಪಕ್ಷವೂ ಲಸಿಕೆ ತಯಾರಿಕೆ ಮಾಡಿರುವ ವಿಜ್ಞಾನಿಗಳು, ತಜ್ಞರು ಹಾಗೂ ಸಂಶೋಧಕರನ್ನ ಪ್ರಶ್ನೆ ಮಾಡಿಲ್ಲ. ಬದಲಾಗಿ ಬಿಜೆಪಿಯನ್ನ ಪ್ರಶ್ನೆ ಮಾಡಿದ್ದೇವೆ. ನಮ್ಮಲ್ಲಿರುವ ಕೆಲವೊಂದು ಅನುಮಾನಗಳಿಗೆ ಸ್ಪಷ್ಟನೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.

ಓದಿ: ಇದು ಬಿಜೆಪಿ ಲಸಿಕೆ, ನಾನು ತೆಗೆದುಕೊಳ್ಳುವುದಿಲ್ಲ: ಅಖಿಲೇಶ್ ಯಾದವ್

ಇದೇ ವೇಳೆ ದೇಶದಲ್ಲಿರುವ ಬಡವರಿಗೆ ಲಸಿಕೆ ಯಾವಾಗ ಸಿಗುತ್ತದೆ? ಅದು ಉಚಿತವಾಗಿ ಲಭ್ಯವಾಗುವುದೇ ಎಂಬುದರ ಬಗ್ಗೆ ಸರ್ಕಾರ ಉತ್ತರ ನೀಡಬೇಕು ಎಂದು ಅವರು ಹೇಳಿದ್ದಾರೆ.

ಬಿಜೆಪಿಯಿಂದ ನೀಡಲಾಗುತ್ತಿರುವ ಲಸಿಕೆಯನ್ನು ನಾನು ಹೇಗೆ ನಂಬಲಿ? ಎಂದು ಅಖಿಲೇಶ್ ಯಾದವ್ ಹೇಳಿರುವುದು ವೈದ್ಯರು ಮತ್ತು ವಿಜ್ಞಾನಿಗಳಿಗೆ ಮಾಡಿದ ಅಪಮಾನ ಎಂದು ಉತ್ತರ ಪ್ರದೇಶ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಕಿಡಿಕಾರಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿಯ ಅನೇಕರು ಅಖಿಲೇಶ್ ಯಾದವ್​ ವಿರುದ್ಧ ವಾಗ್ದಾಳಿ ನಡೆಸಿದ್ದರು.

ದೇಶದಲ್ಲಿ ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಹಾಗೂ ಭಾರತ್​ ಬಯೋಟೆಕ್​ ಅಭಿವೃದ್ಧಿಪಡಿಸಿರುವ ಲಸಿಕೆ ತುರ್ತು ಬಳಕೆ ಮಾಡಲು ಅನುಮತಿ ನೀಡಲಾಗಿದೆ.

ABOUT THE AUTHOR

...view details