ಲಖನೌ:ಉನ್ನಾವೋ ಅತ್ಯಾಚಾರ ಹಾಗೂ ಸಂತ್ರಸ್ತೆ ಹತ್ಯೆ ಪ್ರಕರಣ ಖಂಡಿಸಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಪ್ಪು ದಿನ ( ಬ್ಲಾಕ್ ಡೇ) ಆಚರಿಸುತ್ತಿದ್ದಾರೆ.
ಉನ್ನಾವೋ ಪ್ರಕರಣ: ವಿಧಾನಸಭೆ ಹೊರಗಡೆ ಮಾಜಿ ಸಿಎಂ ಪ್ರತಿಭಟನೆ,ಕಪ್ಪು ದಿನ ಆಚರಣೆ - black day celebrate latest news
ಉನ್ನಾವೋ ಅತ್ಯಾಚಾರ ಹಾಗೂ ಸಂತ್ರಸ್ತೆ ಹತ್ಯೆ ಪ್ರಕರಣ ಖಂಡಿಸಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಪ್ಪು ದಿನ ಆಚರಿಸುತ್ತಿದ್ದಾರೆ.
ಅಷ್ಟೇ ಅಲ್ಲ, ಘಟನೆಯನ್ನು ಖಂಡಿಸಿರುವ ಅಖಿಲೇಶ್ ಯಾದವ್ ತಮ್ಮ ಬೆಂಬಲಿಗರೊಂದಿಗೆ ಉತ್ತರಪ್ರದೇಶ ವಿಧಾನಸಭೆ ಹೊರಗಡೆ ಪ್ರತಿಭಟನೆ ನಡೆಸಿದರು. ಇನ್ನೊಂದು ಕಡೆ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿರುವ ಸಂತ್ರಸ್ತೆ ಸ್ಥಳಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಭೇಟಿ ನೀಡಲಿದ್ದಾರೆ.
ಅತ್ಯಾಚಾರ ಎಸಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳು ಸಂತ್ರಸ್ತೆಗೆ ಬೆಂಕಿ ಇಟ್ಟು ಕೊಲ್ಲುವ ಯತ್ನ ಮಾಡಿದ್ದರು. ದೆಹಲಿಯ ಸಪ್ತರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಂತ್ರಸ್ತೆ ನಿನ್ನೆ ಮೃತಪಟ್ಟಿದ್ದಳು. ಈ ಘಟನೆಗೆ ರಾಷ್ಟ್ರದಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಪ್ರತಿಭಟನೆಗಳ ಕಾವು ಜೋರಾಗುತ್ತಿದೆ.