ನವದೆಹಲಿ:ಭಾರತ-ಚೀನಾ ಗಡಿ ಪ್ರಶ್ನೆ ವಿಚಾರವಾಗಿ ಉಭಯ ದೇಶಗಳ ವಿಶೇಷ ಪ್ರತಿನಿಧಿಗಳ 22ನೇ ಸಭೆ ಮುಕ್ತಾಯವಾಗಿದೆ. ರಾಜತಾಂತ್ರಿಕ ಸಂಬಂಧ 70ನೇ ವಾರ್ಷಿಕೋತ್ಸವದ ಅಂಗವಾಗಿ 70ನೇ ಸ್ಮರಣಾರ್ಥ ಕಾರ್ಯಕ್ರಮಗಳನ್ನು ನಡೆಸಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ತಿಳಿಸಿದ್ದಾರೆ.
ಈ ಸಭೆಯ ಉಭಯ ಉದ್ದೇಶ ದೇಶಗಳ ಗಡಿ ಸಮಸ್ಯೆ ಮಾತ್ರವಲ್ಲ, ಎರಡೂ ದೇಶಗಳ ನಡುವಿನ ಕಾರ್ಯತಂತ್ರದ ಸಂವಹನಕ್ಕೆ ಒಂದು ಪ್ರಮುಖ ವೇದಿಕೆಯಾಗಿದೆ ಎಂದಿದ್ದಾರೆ.
ಇದೇ ವೇಳೆ ಮಾತನಾಡಿರುವ ರಕ್ಷಣಾ ಸಲಹೆಗಾರ ಅಜಿತ್ ಧೋವಲ್, ಭಾರತ ಮತ್ತು ಚೀನಾದ ನಾಯಕರು ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿ ಮತ್ತು ಗಡಿ ಪ್ರಶ್ನೆಯ ಇತ್ಯರ್ಥಕ್ಕೆ ಹೊಸ ದೃಷ್ಟಿ ಮತ್ತು ಕಾರ್ಯತಂತ್ರದ ಮಾರ್ಗದರ್ಶನ ನೀಡಿದ್ದಾರೆ. ಚರ್ಚೆಯ ಮೂಲಕವೇ ದ್ವಿಪಕ್ಷೀಯ ಸಂಬಂಧಗಳ ಅಭಿವೃದ್ಧಿ ಉತ್ತೇಜಿಸಲು ಮತ್ತು ಗಡಿ ಪ್ರಶ್ನೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಚೀನಾ ರಾಜ್ಯ ಕೌನ್ಸೆಲರ್ ಮತ್ತು ವಿದೇಶಾಂಗ ಸಚಿವ ವಾಂಗ್ ಯಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.