ಕರ್ನಾಟಕ

karnataka

By

Published : Jan 19, 2020, 7:07 PM IST

ETV Bharat / bharat

ಏರ್​ಟೆಲ್​ ಗ್ರಾಹಕರಿಗೆ ಬಂಪರ್​ ಕೊಡುಗೆ.. ರೀಚಾರ್ಜ್​ ಜತೆ ವಿಮಾ ಪಾಲಿಸಿ ಫ್ರೀ..

ಭಾರ್ತಿ ಏರ್​ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ 179 ರೂ. ಮೊತ್ತದ ಪ್ರಿಪೇಯ್ಡ್​ ಪ್ಲಾನ್​ವೊಂದನ್ನು ಪರಿಚಯಿಸಿದೆ. ಜೊತೆಗೆ ಭಾರತಿ ಅಕ್ಸಾ ಲೈಫ್ ಇನ್ಶೂರೆನ್ಸ್​ ಎಂಬ ಹೊಸ ವಿಮಾ ಪಾಲಿಸಿಯನ್ನು ಗ್ರಾಹಕರಿಗೆ ನೀಡುತ್ತಿದೆ.

Airtel
ಏರ್​ಟೆಲ್​ ಗ್ರಾಹಕರಿಗೆ ಬಂಪರ್​ ಕೊಡುಗೆ

ನವದೆಹಲಿ: ಏರ್​ಟೆಲ್ ಕಂಪನಿಯು 179 ರೂ. ಮೊತ್ತದ ಪ್ರಿಪೇಯ್ಡ್​ ಪ್ಲಾನ್​ವೊಂದನ್ನು ಪರಿಚಯಿಸುವುದರ ಜೊತೆಗೆ 2 ಲಕ್ಷ ರೂ. ಭಾರತಿ ಅಕ್ಸಾ ಲೈಫ್‌ ಇನ್ಶೂರೆನ್ಸ್‌ ವಿಮಾ ಪಾಲಿಸಿಯನ್ನೂ ಗ್ರಾಹಕರಿಗೆ ನೀಡಲಿದೆ ಎಂದು ತಿಳಿಸಿದೆ.

ಇದೊಂದು ರೀಚಾರ್ಜ್​ ಪ್ಯಾಕ್​ ಆಗಿದೆ. ಇದರ ಜೊತೆ ಭಾರ್ತಿ ಏರ್​ಟೆಲ್ ಕಂಪನಿಯು ಭಾರತಿ ಅಕ್ಸಾ ಲೈಫ್ ಇನ್ಶೂರೆನ್ಸ್​ (Bharti AXA Life Insurance) ನೀಡುತ್ತಿರುವುದು ವಿಶೇಷವಾಗಿದೆ.ಈ ಒಂದು ಪ್ರಿಪೇಯ್ಸ್​​ ಪ್ಲಾನ್​​ನಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮಾಡಬಹುದಾಗಿದೆ. 2ಜಿಬಿ ಡೇಟಾ, 300 ಎಸ್‌ಎಂಎಸ್ ಜೊತೆಗೆ ಭಾರ್ತಿ ಆಕ್ಸಾಲೈಫ್ ಇನ್ಶುರೆನ್ಸ್‌ನಿಂದ 2 ಲಕ್ಷ ರೂ.ಗಳ ಟರ್ಮ್ ಲೈಫ್ ಕವರ್ ನೀಡಲಾಗುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ಯಾಕ್ 28 ದಿನಗಳ ಮಾನ್ಯತೆ ಹೊಂದಿದೆ. ಸ್ಮಾರ್ಟ್‌ಫೋನ್ ಬಳಕೆದಾರರು, ಅರೆ ನಗರ ಮತ್ತು ಗ್ರಾಮೀಣ ಮೊಬೈಲ್​ ಬಳಕೆದಾರರನ್ನು ಗುರಿಯಾಗಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಈ ವಿಮಾ ಸೌಲಭ್ಯವು 18 ರಿಂದ 54 ವರ್ಷದೊಳಗಿನ ಜನರಿಗೆ ಲಭ್ಯವಿರುತ್ತದೆ. ಇದಕ್ಕಾಗಿ ಯಾವುದೇ ಕಾಗದದ ದಾಖಲೆಗಳು ಅಥವಾ ವೈದ್ಯಕೀಯ ಪರೀಕ್ಷೆ ಅಗತ್ಯವಿರುವುದಿಲ್ಲ. ವಿಮಾ ಪಾಲಿಸಿ ಅಥವಾ ಪ್ರಮಾಣಪತ್ರವನ್ನು ಡಿಜಿಟಲ್ ರೂಪದಲ್ಲಿ ಕಳುಹಿಸಲಾಗುತ್ತದೆ. ಈ ಪ್ರಿಪೇಯ್ಡ್ ರೀಚಾರ್ಜ್​ ಪ್ಲಾನ್​ ಮೂಲಕ ಗ್ರಾಹಕರು ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಲು ಮತ್ತು ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸದೃಢವಾಗಿಸಿಕೊಳ್ಳಲು ಸರಳ ಮತ್ತು ಅನುಕೂಲಕರ ಮಾರ್ಗವನ್ನು ಏರ್​ಟೆಲ್ ಒದಗಿಸುತ್ತಿದೆ ಎಂದು ಭಾರ್ತಿ ಏರ್​ಟೆಲ್ ಕಂಪನಿ ಹೇಳಿಕೊಂಡಿದೆ.

ABOUT THE AUTHOR

...view details