ನವದೆಹಲಿ: "ಈ ದಿನಗಳಲ್ಲಿ ನೆಲದ ಮೇಲೆ ಇರುವುದು ಅದ್ಭುತ ಸಂಗತಿಯಾಗಿದೆ, ಇಂಡಿಗೋ. ಹಾರೋದು ಮಾತ್ರ ಸ್ಮಾರ್ಟ್ ಆಯ್ಕೆಯಾಗಿರುವುದಿಲ್ಲ, ಏನು ಹೇಳುತ್ತೀಯಾ ಗೋಏರ್?"
ಇದು ವಿಸ್ತಾರಾ ಏರ್ಲೈನ್ಸ್ ಹೇಳಿರೋ ಮಾತು. ಇತ್ತೀಚೆಗಷ್ಟೇ ಏರ್‌ಏಷ್ಯಾ ಇಂಡಿಯಾ, ಸ್ಪೈಸ್ ಜೆಟ್ ಅನ್ನು ಸೇರಿಕೊಂಡ ವಿಸ್ತಾರಾ, ಟ್ವಿಟ್ಟರ್ನಲ್ಲಿ ಗೋಏರ್ ಏರ್ಲೈನ್ ಕಾಲೆಳೆದಿದ್ದು ಹೀಗೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮೇಲೆ ಹಾರಲಾಗದೆ ನೆಲದಲ್ಲೇ ಉಳಿದುಕೊಂಡಿರುವ ಇಂಡಿಗೋ ಸೇರಿದಂತೆ ವಿವಿಧ ದೇಶದ ವಿಮಾನಯಾನ ಸಂಸ್ಥೆಗಳು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಟೆ ಹೊಡೆಯುತ್ತಾ ಕುಳಿತ ಪರಿ ಇದು.
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಟ್ವೀಟ್ ಮಾಡುವ ಮೂಲಕ ಫನ್ನಿ ಟ್ವೀಟ್ ಫೈಟ್ ಪ್ರಾರಂಭವಾಯಿತು, "ಹೇ @airvistara, ನಾವು ಕೇಳ್ಪಟ್ವಿ, ಇತ್ತೀಚೆಗೆ ನೀನು ಮೇಲಕ್ಕೆ ಹಾರುತ್ತಿಲ್ಲವಂತೆ" ಎಂದು ವಿಸ್ತಾರ ಏರ್ಲೈನ್ಸ್ ಕಾಲೆಳೆದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಸ್ತಾರ "ಇಲ್ಲ ಇಂಡಿಗೋ, ಈ ದಿನಗಳಲ್ಲಿ ಹಾರುವುದಕ್ಕಿಂತ ಮೈದಾನದಲ್ಲಿರುವುದೇ ಅದ್ಭುತ ಸಂಗತಿಯಾಗಿದೆ" ಎಂದು ಇಂಡಿಗೋಗೆ ತಕ್ಕ ಜವಾಬು ನೀಡಿದೆ.
"ಫ್ಲೈಯಿಂಗ್ ಸ್ಮಾರ್ಟ್ ಆಯ್ಕೆಯಾಗುವುದಿಲ್ಲ, ಈ ಬಗ್ಗೆ @ಗೋಏರ್ಲೈನ್ಸ್ ಇಂಡಿಯಾ ಏನು ಹೇಳುತ್ತದೆ?" ಎಂದು ಗೋಏರ್ ಉತ್ತರಿಸಿದ್ದು, ಮನೆಯಲ್ಲೇ ಇರುವುದು ಸುರಕ್ಷಿತ ಎಂದು ಹೇಳಿದೆ.
ಪ್ರತಿಯೊಬ್ಬರೂ ಆಕಾಶಕ್ಕೆ ಕರೆದೊಯ್ಯಲು ಬಯಸುವವರೆಗೂ ನಾವು ಕಾಯಲೇಬೇಕು, ಯಾಕೆಂದರೆ ಈ ಸಮಯದಲ್ಲಿ ಎಲ್ಲರೂ ಹಾರಬಹುದು ಅನ್ನೋ ಮಾತು ಸಮಂಜಸ ಅಲ್ಲವಲ್ಲಾ @AirAsiaIndian?" ಎಂದು ಗೋಏರ್ಲೈನ್ಸ್ ಇಂಡಿಯಾ ಸಣ್ಣ ಸಂದೇಶವನ್ನು ರವಾನೆ ಮಾಡಿತು.
ಪ್ರತಿಕ್ರಿಯೆಗಳ ಸರಪಳಿಯನ್ನು ಮುಂದುವರೆಸುತ್ತಾ, ಏರ್‌ಏಷ್ಯಾ ಇಂಡಿಯಾ ಟ್ವೀಟ್ ಮಾಡಿ, ಮನೆಯಲ್ಲಿಯೇ ಇರುವುದು "ರೆಡ್ ಹಾಟ್ ಮಸಾಲೆಯಂತಾ ಕೆಲಸ" ಎಂದು ಹೇಳಿದೆ.
'ಅದು ಸರಿಯಲ್ಲವೇ?' ಎಂದು ಡೆಲ್ಲಿ ಏರ್ಪೋರ್ಟ್ ಸಂಸ್ಥೆಯು ಸ್ಪೈಸ್ ಜೆಟ್ ಅನ್ನು ಟ್ಯಾಗ್ ಮಾಡಿ, "ನಮ್ಮ ಆಲೋಚನೆಗಳು ನಮ್ಮ ಬಣ್ಣಗಳ ಹೊಂದಾಣಿಕೆಯಂತೆ ಒಂದೇ ಆಗಿದೆ ಎಂಬುದು ತಿಳಿಯಲು ಚೆನ್ನಾಗಿದೆ ಎಂದು ಹೇಳಿದೆ.
"ಈ ಹಕ್ಕಿ ತನ್ನ ಪಂಜರದಿಂದ ಹಾರಿ ಸ್ವಲ್ಪ ಸಮಯವಾಯಿತು. ಆದರೆ ನಾಳೆಗಾಗಿ ಇಂದೇ ಸುರಕ್ಷಿತವಾದ ರಚನೆಯನ್ನು ಮಾಡಿ ಸಂತೋಷಪಡುತ್ತಿದ್ದೇವೆ! ಅಲ್ವಾ ಡೆಲ್ಲಿಏರ್ಪೋರ್ಟ್?" ಎಂದು ಸ್ಪೈಸ್ ಜೆಟ್ ಟ್ವೀಟ್ ಮಾಡಿದೆ.
ಈ ಎಲ್ಲಾ ನಾಲ್ಕು ವಿಮಾನಯಾನ ಸಂಸ್ಥೆಗಳನ್ನು ಟ್ಯಾಗ್ ಮಾಡಿದ ಡೆಲ್ಲಿಏರ್ಪೋರ್ಟ್, "ಭಾರತದ ಆಗಸವು ಶೀಘ್ರದಲ್ಲೇ ನಿಮ್ಮೊಂದಿಗೆ ಬಣ್ಣದಲ್ಲಿ ಕಂಗೊಳಿಸಲಿದೆ. ಆದರೆ ಸದ್ಯಕ್ಕೆ, ನಮ್ಮಲ್ಲಿ ಕಿರುನಗೆಗೆ ಕಾರಣರಾಗಿದ್ದಕ್ಕಾಗಿ ಧನ್ಯವಾದಗಳು!" ಎಂದು ಹೇಳಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿ 21 ದಿನಗಳ ಲಾಕ್‌ಡೌನ್ ಹೇರಲಾಗಿದೆ. ಹೀಗಾಗಿ ಎಲ್ಲಾ ವಾಣಿಜ್ಯ ವಿಮಾನಗಳನ್ನು ಏಪ್ರಿಲ್ 14 ರವರೆಗೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಎಲ್ಲಾ ವಿಮಾನಯಾನ ಸಂಸ್ಥೆಗಳು ಇಂದು ಫನ್ಗಾಗಿ ಟ್ವೀಟ್ ಮಾಡುತ್ತಾ, ಕೊರೊನಾ ವಿರುದ್ಧ ಜಾಗೃತರಾಗಿಯೂ ಇರುವಂತೆ ಸಂದೇಶ ನೀಡಿದೆ.