ಕರ್ನಾಟಕ

karnataka

ETV Bharat / bharat

ಗಾಳಿಯಲ್ಲಿ ಕೊರೊನಾ ವೈರಸ್​ ಹರಡುವ ಭೀತಿ..  ಇಲ್ಲಿವೆ ಮುನ್ನೆಚ್ಚರಿಕಾ ಕ್ರಮಗಳು - coronavirus safety measures

ವೈರಸ್ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದೆ ಮತ್ತು ಇದು 5 ಮೈಕ್ರಾನ್‌ಗಳಿಗಿಂತ ದೊಡ್ಡದಾದ ಹನಿಗಳ ಮೂಲಕ ಹರಡುತ್ತದೆ. ಒಬ್ಬ ವ್ಯಕ್ತಿಯು ಮಾತನಾಡುವಾಗ ಅಥವಾ ಉಸಿರಾಡುವಾಗ ಬಿಡುಗಡೆಯಾಗುವ ಸಣ್ಣ ಹನಿಗಳು ಸ್ವಲ್ಪ ಸಮಯದವರೆಗೆ ಗಾಳಿಯಲ್ಲಿರುತ್ತವೆ ಎಂದು ಡಬ್ಲ್ಯೂಹೆಚ್​ಒ ತಿಳಿಸಿದೆ.

ಕೊರೊನಾ ವಾಯುಗಾಮಿ ಪ್ರಸರಣದ ಭೀತಿ
ಕೊರೊನಾ ವಾಯುಗಾಮಿ ಪ್ರಸರಣದ ಭೀತಿ

By

Published : Jul 20, 2020, 12:01 AM IST

Updated : Jul 20, 2020, 8:33 AM IST

ಹೈದರಾಬಾದ್: ಕೊರೊನಾ ವೈರಸ್​ ವಾಯುಗಾಮಿ (ಗಾಳಿಯಿಂದ ಹರಡುವಿಕೆ) ಮತ್ತು ಏರೋಸಾಲ್ ಪ್ರಸರಣದ ಬಗ್ಗೆ ಪ್ರಪಂಚದಾದ್ಯಂತ ಜನರಲ್ಲಿ ಭೀತಿ ಸೃಷ್ಟಿಯಾಗಿದೆ.

ವೈರಸ್ ಗಾಳಿಯಲ್ಲಿ ತಾತ್ಕಾಲಿಕವಾಗಿ ಉಳಿಯಬಹುದು ಮತ್ತು ಇದರಿಂದ ಸೋಂಕು ಹರಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೋವಿಡ್ ವಾಯುಗಾಮಿ ಎಂಬುದಕ್ಕೆ ಪುರಾವೆಗಳು ಇರುವುದರಿಂದ ಜನರು ಹೆಚ್ಚು ಜಾಗರೂಕರಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ವೈರಸ್ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದೆ ಮತ್ತು ಇದು 5 ಮೈಕ್ರಾನ್‌ಗಳಿಗಿಂತ ದೊಡ್ಡದಾದ ಹನಿಗಳ ಮೂಲಕ ಹರಡುತ್ತದೆ. ಒಬ್ಬ ವ್ಯಕ್ತಿಯು ಮಾತನಾಡುವಾಗ ಅಥವಾ ಉಸಿರಾಡುವಾಗ ಬಿಡುಗಡೆಯಾಗುವ ಸಣ್ಣ ಹನಿಗಳು ಸ್ವಲ್ಪ ಸಮಯದವರೆಗೆ ಗಾಳಿಯಲ್ಲಿರುತ್ತವೆ ಎಂದು ತಿಳಿಸಿದೆ.

5 ಮೈಕ್ರಾನ್‌ಗಳಿಗಿಂತ ಚಿಕ್ಕದಾದ ಲಾಲಾರಸವು ಕೆಲವು ನಿಮಿಷಗಳಲ್ಲಿ ನೆಲೆಗೊಳ್ಳುವ ದೊಡ್ಡ ಹನಿಗಳಿಗಿಂತ ಹೆಚ್ಚು ಕಾಲ ಗಾಳಿಯಲ್ಲಿ ತೇಲುತ್ತದೆ. ಆದ್ದರಿಂದ, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರುವ ಅಪಾಯವನ್ನು ಕಡಿಮೆ ಮಾಡಲು ಹೆಚ್ಚಿನ ಸಮಯದವರೆಗೆ ಮಾಸ್ಕ್​ ಧರಿಸಬೇಕು. ವೈರಸ್ ಸಾಂಕ್ರಾಮಿಕವಾಗಿರುವುದರಿಂದ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಅನೇಕ ಜನರು ಇರುವ ಕೊಠಡಿಗಳಲ್ಲಿ ಪ್ರವೇಶಿಸುವುದನ್ನು ತಪ್ಪಿಸುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಗಾಳಿಯಲ್ಲಿ ತೇಲುತ್ತಿರುವ ವೈರಸ್ ಹನಿಗಳು 6-9 ಅಡಿ ಎತ್ತರಕ್ಕೆ ಚಲಿಸುವ ನಿರೀಕ್ಷೆಯಿದೆ. ಚೀನಾ ಮತ್ತು ಯುಎಸ್​ನ ಕೆಲವು ಪ್ರಕರಣಗಳಲ್ಲಿ, ಜನರು ಕೊರೊನಾ ರೋಗಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುವಾಗ ಸೋಂಕಿಗೆ ಒಳಗಾಗುತ್ತಾರೆ ಎಂಬುದು ಬಹಿರಂಗವಾಗಿದೆ.

ಏತನ್ಮಧ್ಯೆ, ವೈರಸ್ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಕಟ್ಟಡ ಮತ್ತು ಕಚೇರಿಗಳಲ್ಲಿ ಗಾಳಿಯ ಮುಕ್ತ ಹರಿವು ಇರಬೇಕು. ಕಟ್ಟಡವು ಹೆಚ್ಚು ಗಾಳಿ ಹೊಂದಿರಬೇಕು. ತಾಜಾ ಗಾಳಿಯ ಮುಕ್ತ ಹರಿವಿನೊಂದಿಗೆ ಹೆಚ್ಚು ಗಾಳಿ ಇರುವ ಪ್ರದೇಶದಲ್ಲಿ ವೈರಸ್ ದೀರ್ಘಕಾಲ ಬದುಕಲು ಸಾಧ್ಯವಿಲ್ಲ ಎಂದು ಅಧ್ಯಯನಗಳು ತಿಳಿಸಿವೆ.

ವೈರಸ್ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಅಗತ್ಯವಾದ ಮುನ್ನೆಚ್ಚರಿಕೆಗಳು:

  • ಜನರು ಒಂದು ಸ್ಥಳದಲ್ಲಿ ಗುಂಪಾಗಿ ಸೇರಬಾರದು
  • ಲಿಫ್ಟ್ ಬಳಕೆಯನ್ನು ತಪ್ಪಿಸಿ
  • ಸಣ್ಣ ಮಾಸ್ಕ್​ಗಳನ್ನು ಧರಿಸಬೇಡಿ
  • ಮೂಗು, ಬಾಯಿ ಮತ್ತು ಗಂಟಲಿನ ಕೆಳಗಿನ ಭಾಗವನ್ನು ಸಂಪೂರ್ಣವಾಗಿ ಆವರಿಸುವ ಮಾಸ್ಕ್​ ಧರಿಸಿ
  • ಆಸ್ಪತ್ರೆಗೆ ಹೋಗಬೇಕಾದ ಅಥವಾ ಕೊರೊನಾ ರೋಗಿಗೆ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯ ಮಾಸ್ಕ್ ಬಳಸುವುದು ಕಡ್ಡಾಯ
  • ಬಟ್ಟೆಯ ಮುಖವಾಡಗಳನ್ನು ಪ್ರತಿದಿನ ಸ್ವಚ್ಛವಾದ ಸೋಪಿನಿಂದ ತೊಳೆದು, ಸೂರ್ಯನ ಬೆಳಕಿನಲ್ಲಿ ಒಣಗಿಸಿ
  • ಕೈಯಲ್ಲಿ ವೈರಸ್ ಮತ್ತು ಬ್ಯಾಕ್ಟೀರಿಯಾದಂತಹ ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳು ಇರುವುದರಿಂದ ಮಾಸ್ಕ್​ ಸ್ಪರ್ಶಿಸುವುದನ್ನು ತಪ್ಪಿಸಿ

ಶಸ್ತ್ರಚಿಕಿತ್ಸೆಯ ಮಾಸ್ಕ್​ಗಳು ಮೂರು ಪದರಗಳನ್ನು ಒಳಗೊಂಡಿರುತ್ತವೆ. ಹೊರಗಿನ ಪದರವು ತೇವಾಂಶ ಮತ್ತು ಧೂಳಿನ ಕಣಗಳಿಂದ ನಮ್ಮನ್ನು ತಡೆಯುತ್ತದೆ. ಮಧ್ಯದ ಪದರವು ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ವೈರಸ್ ಅನ್ನು ತಡೆಯುತ್ತದೆ. ಉಸಿರುಗಟ್ಟಿಸುವುದನ್ನು ತಪ್ಪಿಸಲು ಒಳ ಮತ್ತು ಮೂರನೇ ಪದರವು ಬೆವರು ಮತ್ತು ತೇವಾಂಶವನ್ನು ಹೀರಿಕೊಳ್ಳುತ್ತದೆ.

ಸುಮಾರು 90% ಜನರು ತಮ್ಮ ಮುಖದಿಂದ ಮಾಸ್ಕ್​ಗಳನ್ನು ಹೊರತೆಗೆಯುತ್ತಾರೆ. ಇದು ಸೋಂಕಿಗೆ ಒಳಗಾಗುವ ಅಪಾಯವನ್ನು ಹೆಚ್ಚಿಸುತ್ತದೆ.

Last Updated : Jul 20, 2020, 8:33 AM IST

ABOUT THE AUTHOR

...view details