ನವದೆಹಲಿ: ಏರೋಸಾಲ್ ವೈದ್ಯಕೀಯ ವಿಧಾನದ ವೇಳೆ ಉತ್ಪಾದನೆಯಾಗುವ ಸಣ್ಣ ಹನಿಗಳ ಮೂಲಕ ಕೋವಿಡ್ -19 ವೈರಸ್ ಹರಡಬಹುದು (ವಾಯುಗಾಮಿ ಪ್ರಸರಣ) ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಏರೋಸಾಲ್ ಮೂಲಕ ಕೊರೊನಾ ವೈರಸ್ ಹರಡುತ್ತದೆ: ಕೇಂದ್ರ ಆರೋಗ್ಯ ಇಲಾಖೆ - ಏರೋಸಾಲ್ ವೈದ್ಯಕೀಯ ವಿಧಾನ
ಕೊರೊನಾ ಸೋಂಕು ಏರೋಸಾಲ್ ಮೂಲಕ ಹರಡಬಹುದು ಎಂದು ಸಂಸತ್ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.
ಗಾಳಿಯೊಂದಿಗೆ ಸಣ್ಣ ಕಣಗಳ ಮೂಲಕ ರೋಗ ಹರಡುವುದು ವಾಯುಗಾಮಿ ಪ್ರಸರಣ ಎಂದು ಕರೆಯುತ್ತಾರೆ. ಕೊರೊನಾ ಸೋಂಕು ಕೂಡ ಏರೋಸಾಲ್ ಮೂಲಕ ಹರಡಬಹುದು ಎಂದು ಸಂಸತ್ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ.
ದೇಶದಲ್ಲಿರುವ ಕೋವಿಡ್ ಕೇಸ್ಗಳ ಪೈಕಿ 10 ರಾಜ್ಯಗಳಲ್ಲಿ ಶೇ.77 ರಷ್ಟು ಪ್ರಕರಣಗಳು ಸಕ್ರಿಯವಾಗಿವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಛ್ತತೀಸ್ಗಢ, ತೆಲಂಗಾಣ, ಒಡಿಶಾ, ಅಸ್ಸೋಂ ಮತ್ತು ಕೇರಳ ರಾಜ್ಯಗಳು ಈ ಪಟ್ಟಿಯಲ್ಲಿವೆ. ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್ ಲಸಿಕೆಯನ್ನು ತ್ವರಿತವಾಗಿ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಚೌಬೆ ಹೇಳಿದರು.