ಕರ್ನಾಟಕ

karnataka

ETV Bharat / bharat

ಮಿಗ್​ 21 ಹೊಡೆದುರುಳಿಸಲು ಎಫ್​ 16 ಬಳಕೆಗೆ ಸಿಕ್ತು ಸಾಕ್ಷಿ... ಬಯಲಲ್ಲಿ ಬೆತ್ತಲಾದ ಪಾಕ್​ - ಏರ್​ ವೈಸ್​ ಮಾರ್ಷಲ್​ ಆರ್​ಜಿಕೆ ಕಪೂರ್

ಭಾರತದ ಮಿಗ್​ 21 ಯುದ್ಧ ವಿಮಾನ ಹೊಡೆದುರುಳಿಸಲು ಪಾಕಿಸ್ತಾನ ಎಫ್​ 16 ಜೆಟ್ ಬಳಸಿತ್ತು ಎಂಬ ಬಗ್ಗೆ ಪಾಕ್​ ಸುಳ್ಳು ಹೇಳುತ್ತಿದೆ ಎಂದು ಏರ್​ ವೈಸ್​ ಮಾರ್ಷಲ್​ ಆರ್​ಜಿಕೆ ಕಪೂರ್​ ಹೇಳಿದರು

ಏರ್​ ವೈಸ್​ ಮಾರ್ಷಲ್​ ಆರ್​ಜಿಕೆ ಕಪೂರ್ ಸುದ್ದಿಗೋಷ್ಠಿ

By

Published : Mar 1, 2019, 1:30 PM IST

ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ ಮಿಗ್​ 21 ಯುದ್ಧ ವಿಮಾನ ಹೊಡೆದುರುಳಿಸಲು ಪಾಕಿಸ್ತಾನ ಎಫ್​ 16 ಜೆಟ್ ಬಳಸಿತ್ತು ಎಂಬುದಕ್ಕೆ ಸಾಕ್ಷಿ ಸಿಕ್ಕಿದ್ದು, ಈವರೆಗೆ ಸುಳ್ಳು ಹೇಳಿಕೊಂಡೇ ಬಂದಿದ್ದ ಪಾಕ್​ ಈಗ ಬಯಲಲ್ಲಿ ಬೆತ್ತಲಾಗಿದೆ.

ಏರ್​ ವೈಸ್​ ಮಾರ್ಷಲ್​ ಆರ್​ಜಿಕೆ ಕಪೂರ್​ ಅವರು ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಬಹಿರಂಗಗೊಳಿಸಿದ್ದಾರೆ ಪಾಕ್​ ಪಡೆಗಳು ಮಿಗ್​ 21 ಹೊಡೆದುರುಳಿಸಲು ಎಐಎಂ -120 ಅತ್ಯಾಧುನಿಕ ಮಧ್ಯಮ ಕ್ಷಿಪಣಿ ಬಳಸಿದ್ದು ಎಫ್​16 ಹೊರತುಪಡಿಸಿ ಈ ಕ್ಷಿಪಣಿಯನ್ನು ಉಡಾಯಿಸಬಲ್ಲ ಇನ್ಯಾವುದೇ ಅತ್ಯಾಧುನಿಕ ಜೆಟ್​ಗಳು ಪಾಕಿಸ್ತಾನ ವಾಯುಪಡೆ ಬಳಿ ಇಲ್ಲ ಎಂದು ಹೇಳಿದರು.

ಪಾಕ್​ ಬಳಸಿದ್ದ ಎಐಎಂ -120 ಕ್ಷಿಪಣಿಯ ಅವಶೇಷಗಳು ಜಮ್ಮುಕಾಶ್ಮೀರದ ರಾಜೌರಿ ಬಳಿ ದೊರಕಿದ್ದು, ಸುದ್ದಿಗೋಷ್ಠಿಯಲ್ಲಿ ಅದನ್ನು ಪ್ರದರ್ಶಿಸಲಾಯಿತು.

ಈ ವಾಯುದಾಳಿಗೆ ಪಾಕಿಸ್ತಾನ ಎಫ್​ 16 ಯುದ್ಧ ವಿಮಾನ ಬಳಸಿಲ್ಲ ಎಂದು ಮೊದಲಿನಿಂದ ಹೇಳಿಕೊಂಡು ಬಂದಿತ್ತು.

ABOUT THE AUTHOR

...view details