ನವದೆಹಲಿ:ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಭಾರತೀಯ ವಾಯುಸೇನೆ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಬಿ.ಎಸ್.ಧನೋವ ಅವರ ಅಧಿಕಾರ ಅವಧಿ ಪೂರ್ಣಗೊಂಡಿದ್ದರಿಂದ ಇಂದು ನಿವೃತ್ತಿ ಹೊದಿದ್ದಾರೆ. ಆ ಸ್ಥಾನಕ್ಕೆ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರನ್ನ ಆಯ್ಕೆ ಮಾಡಲಾಗಿದ್ದು, 2 ವರ್ಷಗಳ ಅಧಿಕಾರ ಅವಧಿಯನ್ನ ಹೊಂದಿದ್ದಾರೆ.
ಇದೇ ವೇಳೆ, ಏರ್ಸ್ಟ್ರೈಕ್ ಕುರಿತಂತೆ ಮಾತನಾಡಿದ ಅವರು, ನಾವು ಮುಂದೆಯೂ ಕೂಡ ಇಂತಹ ಸವಾಲುಗಳಿಗೆ ಸಿದ್ದರಾಗುತ್ತೇವೆ. ಎಂಥಾ ಸವಾಲುಗಳನ್ನಾದರೂ ಎದುರಿಸಲು ನಾವು ರೆಡಿ ಎಂದಿದ್ದಾರೆ. ರಫೇಲ್ ಯುದ್ಧ ವಿಮಾನ ಕುರಿತು ಮಾತನಾಡಿದ್ದು, ರಫೇಲ್ ಬಹಳ ಸಮರ್ಥವಾದ ಯುದ್ಧ ವಿಮಾನವಾಗಿದ್ದು, ನಮ್ಮ ಕಾರ್ಯಾಚರಣೆಯಲ್ಲಿ ಗೇಮ್ ಚೇಂಜರ್ ಆಗಿರುತ್ತದೆ. ನೆರೆಯ ರಾಷ್ಟ್ರಗಳಿಗಿಂತ ನಮ್ಮ ವಾಯುಸೇನೆಯ ಬಲವನ್ನ ಹೆಚ್ಚಿಸುತ್ತದೆ ಎಂದಿದ್ದಾರೆ.
39 ವರ್ಷಗಳಿಂದ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಕೇಶ್ ಕುಮಾರ್ ಸಿಂಗ್, ಏರ್ ಆಫೀಸರ್ ಕಮಾಂಡಿಂಗ್ ಚೀಫ್ ಸೇರಿದಂತೆ ಹಲವು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಹಲವಾರು ಮೆಡಲ್ಗಳನ್ನ ಪಡೆದುಕೊಂಡಿದ್ದಾರೆ.