ಹೈದರಾಬಾದ್: ಏರ್ ಇಂಡಿಯಾ ಮತ್ತು ವಿಸ್ತಾರಾ ತನ್ನ ದೇಶೀಯ ಬುಕಿಂಗ್ ಇಂದಿನಿಂದ ಪ್ರಾರಂಭಿಸುವುದಾಗಿ ತಿಳಿಸಿದೆ.
ಏರ್ ಇಂಡಿಯಾ ಹಾಗೂ ವಿಸ್ಟಾರಾ ಟಿಕೆಟ್ ಬುಕಿಂಗ್ ಪ್ರಾರಂಭ! - ಏರ್ ಇಂಡಿಯಾ
ಇಂದಿನಿಂದ ದೇಶೀಯ ಬುಕಿಂಗ್ ಪ್ರಾರಂಭಿಸುವುದಾಗಿ ಏರ್ ಇಂಡಿಯಾ ಮತ್ತು ವಿಸ್ಟಾರಾ ತಿಳಿಸಿದೆ.

flight booking
"ಗುಡ್ ನ್ಯೂಸ್! ನಮ್ಮ ದೇಶೀಯ ಫ್ಲೈಟ್ ಬುಕಿಂಗ್ ಇಂದು 12.30ರಿಂದ ಪ್ರಾರಂಭವಾಗಲಿದೆ. ಬುಕ್ ಮಾಡಲು http://airindia.inಗೆ ಲಾಗಿನ್ ಆಗಿ ಅಥವಾ ಅಧಿಕೃತ ಟ್ರಾವೆಲ್ ಏಜೆಂಟರನ್ನು ಸಂಪರ್ಕಿಸಿ ಅಥವಾ ನಮ್ಮ ಬುಕಿಂಗ್ ಕಚೇರಿಗಳಿಗೆ ಭೇಟಿ ನೀಡಿ ಅಥವಾ ಕಸ್ಟಮರ್ ಕೇರ್ಗೆ ಕರೆ ಮಾಡಿ" ಎಂದು ಏರ್ ಇಂಡಿಯಾ ಟ್ವೀಟ್ ಮಾಡಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಆದೇಶದ ಮೇರೆಗೆ 2020ರ ಮೇ 25ರಿಂದ ವಿಸ್ಟಾರಾ ಕೂಡಾ ತನ್ನ ದೇಶೀಯ ವಿಮಾನಯಾನಗಳನ್ನು ಪುನರಾರಂಭಿಸುವುದಾಗಿ ಘೋಷಿಸಿದೆ.