ಕರ್ನಾಟಕ

karnataka

ETV Bharat / bharat

ಮೋದಿ ಕರೆಗೆ ಕೈಜೋಡಿಸಿದ ಏರ್ ಇಂಡಿಯಾ... ಏಕಬಳಕೆ ಪ್ಲಾಸ್ಟಿಕ್​ ನಿಷೇಧಕ್ಕೆ ತೀರ್ಮಾನ - ಪ್ಲಾಸ್ಟಿಕ್

ಅಕ್ಟೋಬರ್​ 2ರಿಂದ ಏಕಬಳಕೆಯ ಪ್ಲಾಸ್ಟಿಕ್​ಗಳಾದ ಬ್ಯಾಗ್​​, ಕಪ್​ ಹಾಗೂ ಸ್ಟ್ರಾಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಏರ್ ಇಂಡಿಯಾ ಸಂಸ್ಥೆ ತೀರ್ಮಾನಿಸಿದೆ.

ಏರ್ ಇಂಡಿಯಾ

By

Published : Aug 29, 2019, 3:06 PM IST

ನವದೆಹಲಿ: ಪ್ಲಾಸ್ಟಿಕ್ ಬಳಕೆಯನ್ನು ಬಳಕೆಗೆ ಕಡಿವಾಣ ಹಾಕುವಂತೆ ಪ್ರಧಾನಿ ಮೋದಿ ಈಗಾಗಲೇ ದೇಶದ ಜನತೆಗೆ ಕರೆಕೊಟ್ಟಿದ್ದು, ಇದೇ ನಿಟ್ಟಿನಲ್ಲಿ ದೇಶದ ಖ್ಯಾತ ವಿಮಾನಯಾನ ಸಂಸ್ಥೆ ಏರ್​ ಇಂಡಿಯಾ ಸ್ಪಂದಿಸಿದೆ.

ಅಕ್ಟೋಬರ್​ 2ರಿಂದ ಏಕಬಳಕೆಯ ಪ್ಲಾಸ್ಟಿಕ್​ಗಳಾದ ಬ್ಯಾಗ್​​, ಕಪ್​ ಹಾಗೂ ಸ್ಟ್ರಾಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಏರ್ ಇಂಡಿಯಾ ಸಂಸ್ಥೆ ತೀರ್ಮಾನಿಸಿದೆ.

ಪ್ಲಾಸ್ಟಿಕ್​ಗಳಲ್ಲಿ ದೊರೆತ್ತಿದ್ದ ಎಲ್ಲ ಆಹಾರ ವಸ್ತುಗಳು ಇನ್ನು ಮುಂದೆ ಏರ್​ ಇಂಡಿಯಾ ವಿಮಾನಗಳಲ್ಲಿ ಕಾಗದ ಆಕ್ರಮಿಸಿಕೊಳ್ಳಲಿವೆ.

ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಪ್ಲಾಸ್ಟಿಕ್​​ ಬಳಕೆಯನ್ನು ಕನಿಷ್ಠಮಟ್ಟಕ್ಕೆ ಇಳಿಕೆ ಮಾಡಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಮನವಿ ಮಾಡಿದ್ದರು.

ABOUT THE AUTHOR

...view details