ನವದೆಹಲಿ:ಚೀನಾದಲ್ಲಿ ಹುಟ್ಟಿಕೊಂಡ ಮಾರಣಾಂತಿಕ ಕೊರೊನಾ ವೈರಸ್ ತ್ವರಿತ ಗತಿಯಲ್ಲಿ ವಿಶ್ವವನ್ನು ಆವರಿಸುತ್ತಿದ್ದು, ಭಾರತ ಸೇರಿದಂತೆ ಆಯಾ ದೇಶಗಳು ಚೀನಾದಲ್ಲಿರುವ ತಮ್ಮವರನ್ನು ಸ್ಥಳಾಂತರಿಸಲು ಸತತ ಪ್ರಯತ್ನ ನಡೆಸುತ್ತಿವೆ.
ದೆಹಲಿಯಿಂದ ವುಹಾನ್‌ಗೆ: ಭಾರತೀಯರ ರಕ್ಷಣೆಗೆ ಹೊರಡಲಿರುವ ಏರ್ ಇಂಡಿಯಾ ವಿಶೇಷ ವಿಮಾನ - ಕೊರೊನಾ ವೈರಸ್
ಚೀನಾದ ವುಹಾನ್ ನಗರದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಇಂದು ದೆಹಲಿಯಿಂದ ಏರ್ ಇಂಡಿಯಾದ ವಿಶೇಷ ವಿಮಾನ ಹೊರಡಲಿದೆ ಎಂದು ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೊಹಾನಿ ಮಾಹಿತಿ ನೀಡಿದ್ದಾರೆ.

ಏರ್ ಇಂಡಿಯಾ
ಇದೀಗ ಚೀನಾದ ವುಹಾನ್ ನಗರದಲ್ಲಿ ವೈರಸ್ ಭೀತಿ ಎದುರಿಸುತ್ತಿರುವ ಭಾರತೀಯ ಪ್ರಜೆಗಳನ್ನು ಕರೆತರಲು ಇಂದು ಮಧ್ಯಾಹ್ನ 12 ಕ್ಕೆ ದೆಹಲಿಯಿಂದ ಏರ್ ಇಂಡಿಯಾದ B747 ವಿಶೇಷ ವಿಮಾನ ಹೊರಡಲಿದೆ ಎಂದು ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಶ್ವನಿ ಲೊಹಾನಿ ಮಾಹಿತಿ ನೀಡಿದ್ದಾರೆ.
ಜನವರಿ 31 ರಿಂದ ಫೆಬ್ರವರಿ 14 ರವರೆಗೆ ದೆಹಲಿ-ಶಾಂಘೈ ಮಾರ್ಗದಲ್ಲಿ ಏರ್ ಇಂಡಿಯಾ ತನ್ನ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ದೆಹಲಿ-ವುಹಾನ್ ಮಾರ್ಗದಲ್ಲಿ ಹಾರಾಟ ನಡೆಸಲಿದ್ದು, ಸುಮಾರು 400 ಭಾರತೀಯರನ್ನು ಹೊತ್ತು ನಾಳೆ ಬೆಳಗ್ಗೆ 2 ಗಂಟೆಗೆ ಹಿಂದಿರುಗಲಿದೆ.
Last Updated : Jan 31, 2020, 12:06 PM IST