ಕರ್ನಾಟಕ

karnataka

ETV Bharat / bharat

ಸಿಡ್ನಿಗೆ ತೆರಳಿದ್ದ ಏರ್​ ಇಂಡಿಯಾ ವಿಮಾನದ ಪೈಲಟ್​ಗೆ ಕೋವಿಡ್​ ಪಾಸಿಟಿವ್ - ದೆಹಲಿ- ಸಿಡ್ನಿ ಏರ್​ ಇಂಡಿಯಾ ವಿಮಾನದ ಪೈಲಟ್​ಗೆ ಕೋವಿಡ್​ ಪಾಸಿಟಿವ್

ಜೂನ್ 16 ರಂದು ನಡೆಸಿದ ಕೋವಿಡ್​ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದ ವಂದೇ ಭಾರತ್​ ಮಿಷನ್​ನ ಏರ್​ ಇಂಡಿಯಾ ವಿಮಾನದ ಪೈಲಟ್ ಒಬ್ಬರಿಗೆ ಎರಡನೇ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಸಿಡ್ನಿಯಲ್ಲಿ ಐಸೋಲೇಟ್​ ಮಾಡಲಾಗಿದೆ.​

Air India pilot tests positive for COVID-19
ಪೈಲಟ್​ಗೆ ಕೋವಿಡ್​ ಪಾಸಿಟಿವ್

By

Published : Jun 23, 2020, 8:24 AM IST

ನವದೆಹಲಿ : ದೆಹಲಿಯಿಂದ ಸಿಡ್ನಿಗೆ ತೆರಳಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಒಬ್ಬರಿಗೆ ಕೋವಿಡ್​ ಪಾಸಿಟಿವ್ ಬಂದಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 16 ರಂದು ಪೈಲಟ್​ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ನೆಗೆಟಿವ್ ವರದಿ ಬಂದಿತ್ತು. ಹೀಗಾಗಿ ನಿಯಮದ ಪ್ರಕಾರ, ಜೂನ್ 20 ರ ದೆಹಲಿ - ಸಿಡ್ನಿ ವಿಮಾನದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಲಾಗಿತ್ತು. ವಿಮಾನ ಹಾರಾಟ ಪ್ರಾರಂಭಿಸುವ ಮೊದಲು ಮತ್ತೆ ಸ್ಯಾಂಪಲ್ಸ್ ತೆಗೆದುಕೊಳ್ಳಲಾಗಿತ್ತು. ಇದರ ವರದಿ ಪಾಸಿಟಿವ್ ಬಂದಿದೆ.

ಸದ್ಯ ಪೈಲಟ್ ಮತ್ತು ಇಬ್ಬರು ಸಿಬ್ಬಂದಿಯನ್ನ ಸಿಡ್ನಿಯಲ್ಲಿ ಐಸೋಲೇಟ್​ ಮಾಡಲಾಗಿದೆ. ಇತರ ಯಾವುದೇ ಕ್ಯಾಬಿನ್ ಕ್ರೂ ಅಥವಾ ಪ್ರಯಾಣಿಕರು ಪೈಲಟ್‌ನೊಂದಿಗೆ ಸಂಪರ್ಕ ಹೊಂದಿರದ ಕಾರಣ ಯಾರನ್ನೂ ಕ್ವಾರಂಟೈನ್ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಿ -ಫ್ಲೈಟ್ ಪ್ರೊಟೋಕಾಲ್ ಪ್ರಕಾರ, ವಿಮಾನ ನಿರ್ಗಮನದ ದಿನಾಂಕಕ್ಕಿಂತ ಐದು ದಿನಗಳ ಮೊದಲು ಪೈಲಟ್​ ನಿಗದಿತ ಸ್ಥಳಕ್ಕೆ ಭೇಟಿ ನೀಡಿ ಕೋವಿಡ್​ ಪರೀಕ್ಷೆಗೆ ಸ್ಯಾಂಪಲ್ಸ್​ ನೀಡಬೇಕಾಗುತ್ತದೆ. ಜೂನ್ 20 ರ ದೆಹಲಿ - ಸಿಡ್ನಿ ವಿಮಾನ ನಿರ್ಗಮಿಸುವ ನಾಲ್ಕು ದಿನಗಳ ಮೊದಲು ಪೈಲಟ್​ಗೆ ನೆಗೆಟಿವ್ ಬಂದಿದ್ದರಿಂದ ಅವರಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ವಿಮಾನ ಹಾರಾಟಕ್ಕೆ ಸ್ವಲ್ಪ ಮೊದಲು ಎರಡನೇ ಬಾರಿಗೆ ಯಾಕೆ ಸ್ಯಾಂಪಲ್ಸ್​ ನೀಡಿದರು ಎಂಬುವುದು ಸ್ಪಷ್ಟವಾಗಿಲ್ಲ.

ಜೂನ್​ 20 ರಂದು ಸಿಡ್ನಿಗೆ ಪ್ರಯಾಣಿಸಿದ ವಿಮಾನ ವಂದೇ ಭಾರತ್​ ಮಿಷನ್​ ಭಾಗವಾಗಿತ್ತು.

ABOUT THE AUTHOR

...view details