ಕರ್ನಾಟಕ

karnataka

ETV Bharat / bharat

ಜುಲೈ 18ರಿಂದ ದೆಹಲಿ, ಮುಂಬೈ, ಬೆಂಗಳೂರಿಗೆ ಪ್ಯಾರಿಸ್​ನಿಂದ 28 ವಿಮಾನ ಹಾರಾಟ - ವಿಮಾನಯಾನ ಸೇವೆ

ಕೋವಿಡ್​ ಬಿಕ್ಕಟ್ಟಿನ ನಡುವೆ ಜುಲೈ 18ರಿಂದ ಫ್ರಾನ್ಸ್​​ನಿಂದ ಭಾರತದ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

Puri
Puri

By

Published : Jul 16, 2020, 5:18 PM IST

ನವದೆಹಲಿ: ಕೊರೊನಾ ಅಬ್ಬರದ ನಡುವೆ ಏರ್​ ಫ್ರಾನ್ಸ್​​​ ಜುಲೈ 18ರಿಂದ ಆಗಸ್ಟ್​​ 1ರವರೆಗೆ ದೆಹಲಿ, ಮುಂಬೈ ಹಾಗೂ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲು ಮುಂದಾಗಿದ್ದು, ಒಟ್ಟು 28 ವಿಮಾನಗಳ ಸೇವೆ ಶುರುವಾಗಲಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್​​ ಪುರಿ, ಫ್ರಾನ್ಸ್​​, ಯುಎಸ್​ ಹಾಗೂ ಜರ್ಮನಿಗೆ ವಿಮಾನ ಸೇವೆ ಆರಂಭಿಸಲು ತಿಳಿಸಲಾಗಿದೆ ಎಂದರು.

ಜುಲೈ 17ರಿಂದ 31ರವರೆಗೆ ಅಮೆರಿಕದ 18 ವಿಮಾನ ಹಾರಾಟ ಮಾಡಲಿದೆ. ಈ ಬಗ್ಗೆ ಜರ್ಮನಿ ಬಳಿಯಲ್ಲೂ ಮನವಿ ಮಾಡಿಕೊಂಡಿದ್ದಾಗಿ ಸಚಿವರು ತಿಳಿಸಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗಿರುವ ಕಾರಣ ಕಡಿಮೆ ಪ್ರಮಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಾಗಿದೆ. ವಿಶೇಷವೆಂದರೆ ಮಾರ್ಚ್​ 23ರಿಂದ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆ ಬಂದ್​ ಮಾಡಲಾಗಿತ್ತು.

ABOUT THE AUTHOR

...view details