ಜೋಧ್ಪುರ: ದಕ್ಷಿಣ ರಾಜಸ್ಥಾನದ ಸಿರೊಹಿ ಎಂಬಲ್ಲಿ ಭಾರತೀಯ ವಾಯುಪಡೆಯ ಮಿಗ್-27 ಜೆಟ್ ಯುದ್ಧ ವಿಮಾನ ಇಂದು ಪತನಗೊಂಡಿದೆ. ಜೆಟ್ನಲ್ಲಿದ್ದ ಪೈಲಟ್ಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಿಗ್ 27 ಯುಪಿಜಿ ಜೆಟ್ ವಿಮಾನ ಎಂದಿನ ಅಭ್ಯಾಸದಲ್ಲಿ ತೊಡಗಿದ್ದಾಗ ತಾಂತ್ರಿಕ ದೋಷದಿಂದ ಜೋಧ್ಪುರದಿಂದ 180 ಕಿ.ಮೀ ದೂರದಲ್ಲಿರುವ ಸಿರೊಹಿಯ ಗೊದಾನ್ ಎಂಬಲ್ಲಿ ನೆಲಕ್ಕುರುಳಿದೆ. ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ಜೆಟ್ನ ಭಗ್ನಾವಶೇಷಗಳು ಬಿದ್ದಿವೆ.
ಸಿರೊಹಿಯಲ್ಲಿ ಮಿಗ್-27 ಜೆಟ್ ಯುದ್ಧ ವಿಮಾನ ಪತನ ಇಂದು ಮಧ್ಯಾಹ್ನ 12:30ರ ಸುಮಾರಿಗೆ ಜೆಟ್ ವಿಮಾನ ಜೋಧ್ಪುರದಿಂದ ಹಾರಾಟ ಆರಂಭಿಸಿತ್ತು. ಶಿವಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋದಾನ್ ಡ್ಯಾಮ್ ಬಳಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಿರೊಹಿಯಲ್ಲಿ ಮಿಗ್-27 ಜೆಟ್ ಯುದ್ಧ ವಿಮಾನ ಪತನ ಜೆಟ್ ಪತನವಾದ ಶಬ್ದ ಕೇಳಿ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದರು. ಗಂಭೀರವಾಗಿ ಗಾಯಗೊಂಡ ಪೈಲಟ್ಗೆ ಚಿಕಿತ್ಸೆ ನಡೆಯುತ್ತಿದೆ. ಘಟನೆ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಸಹ ರಾಜಸ್ಥಾನದ ಜೈಸಲ್ಮರ್ ಎಂಬಲ್ಲಿ ಮಿಗ್-27 ವಿಮಾನ ಪತನವಾಗಿತ್ತು. ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.