ನವದೆಹಲಿ:ಫೆಬ್ರವರಿ 27ರಂದು ಜಮ್ಮು-ಕಾಶ್ಮೀರದ ಶ್ರೀನಗರದ ವಾಯುನೆಲೆಯಿಂದ ಟೇಕಾಫ್ ಆದ ವಾಯುಪಡೆಯ 'Mi-17' ಹೆಲಿಕಾಪ್ಟರ್ ಅನ್ನು ವಾಯುಪಡೆಯ ಕ್ಷಿಪಣಿಯೇ ಹೊಡೆದುರುಳಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ವಾಯುಪಡೆ ಮುಖ್ಯಸ್ಥರು ಮಾತನಾಡಿದ್ದಾರೆ.
ನಮ್ಮದೇ Mi-17 ಹೆಲಿಕಾಪ್ಟರ್ಅನ್ನು ನಾವೇ ಹೊಡೆದುರುಳಿಸಿದ್ದು, ಅದರಲ್ಲಿ ನಮ್ಮಿಂದ ದೊಡ್ಡ ತಪ್ಪಾಗಿದೆ ಎಂದಿರುವ ಮುಖ್ಯಸ್ಥ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಂದಿ ಐಎಎಫ್ ಸಿಬ್ಬಂದಿ ಹಾಗೂ ನಾಗರಿಕ ಸಾವನ್ನಪ್ಪಿದ್ದರು.