ಹೈದರಾಬಾದ್: ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್ ಸದಸ್ಯರು ಮಂಗಳವಾರ ತೆಲಂಗಾಣ ರಾಜ್ಯ ವಿಧಾನಸಭೆ ಕಲಾಪ ಬಹಿಷ್ಕರಿಸಿದ್ದಾರೆ.
ನರಸಿಂಹ ರಾವ್‌ಗೆ ಭಾರತ ರತ್ನ ನೀಡಲು ತೆಲಂಗಾಣ ಸರ್ಕಾರ ಆಗ್ರಹ: ವಿರೋಧ ವ್ಯಕ್ತಪಡಿಸಿದ ಎಐಎಂಐಎಂ - ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹಾದ್-ಉಲ್-ಮುಸ್ಲೀಮೀನ್
ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹ ರಾವ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸುವಂತೆ ತೆಲಂಗಾಣ ವಿಧಾನಸಭೆ ಕೇಂದ್ರ ಸರ್ಕಾರವನ್ನು ಸರ್ವಾನುಮತದಿಂದ ಆಗ್ರಹಿಸಿದೆ.ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಒವೈಸಿ ನೇತೃತ್ವದ ಪಕ್ಷದ ಸದಸ್ಯರು ಕಲಾಪ ಬಹಿಸ್ಕರಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹ ರಾವ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸುವಂತೆ ತೆಲಂಗಾಣ ವಿಧಾನಸಭೆ ಕೇಂದ್ರ ಸರ್ಕಾರವನ್ನು ಸರ್ವಾನುಮತದಿಂದ ಆಗ್ರಹಿಸಿದೆ.ಈ ಹಿನ್ನೆಲೆ ಒವೈಸಿ ನೇತೃತ್ವದ ಪಕ್ಷದ ಸದಸ್ಯರು ಕಲಾಪ ಬಹಿಸ್ಕರಿಸಿದ್ದಾರೆ. 2005 ರಂದು ಅಂದಿನ ಮುಖ್ಯಮಂತ್ರಿ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಅವರು ಮಾಜಿ ಪ್ರಧಾನಿ ಅವರ ನಿಧನದ ಬಗ್ಗೆ ಸಂತಾಪ ನಿರ್ಣಯವನ್ನು ಮಂಡಿಸಿದಾಗ, ನಮ್ಮ ಪಕ್ಷದ ನಿಲುವನ್ನು ವಿಧಾನಸಭೆಯ ಕಲಾಪದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಬಾಬರಿ ಮಸೀದಿ ಉರುಳಿಸಿದ ವಿಚಾರದಲ್ಲಿ ಭಾರತೀಯ ಮುಸ್ಲಿಮರು ಮಾಜಿ ಪ್ರಧಾನಿ ಮೇಲೆ ಇನ್ನೂ ಕೋಪದಿಂದ ಇದ್ದಾರೆ ಎಂದು ಅಂದು ಒವೈಸಿ ಹೇಳಿದ್ದರು ಎಂದು ಎಐಎಂಐಎಂ ಶಾಸಕ ಮತ್ತು ಪ್ರಧಾನ ಕಾರ್ಯದರ್ಶಿ ಸೈಯದ್ ಅಹ್ಮದ್ ಪಾಷಾ ಕ್ವಾಡ್ರಿ ಹೇಳಿದ್ದಾರೆ.
ಭಾರತದ ಪ್ರಧಾನ ಮಂತ್ರಿಯಾಗಿ ರಾವ್ ಅವರ ರಾಜಕೀಯ ನಿಷ್ಕ್ರಿಯತೆಯಿಂದ ಆದ ಬಾಬರಿ ಮಸೀದಿ ಧ್ವಂಸವನ್ನು ಪಕ್ಷ ಅಥವಾ ಇತಿಹಾಸ ಎಂದೂ ಕೂಡ ಮರೆಯುವುದಿಲ್ಲ ಎಂದು ಕ್ವಾಡ್ರಿ ಇದೇ ವೇಳೆ ಹೇಳಿದರು. ಬಾಬರಿ ಮಸೀದಿ ಧ್ವಂಸಕ್ಕೆ ಮೌನ ಪ್ರೇಕ್ಷಕನಾಗಿ ಉಳಿದ ರಾವ್, 1992 ರ ಡಿಸೆಂಬರ್ 6 ರಂದು ತಾತ್ಕಾಲಿಕ ದೇವಾಲಯವನ್ನು ನಿರ್ಮಿಸಲು ಅವಕಾಶ ನೀಡುವ ಮೂಲಕ ಹಿಂದುತ್ವದ ಬಗ್ಗೆ ಹೆಚ್ಚಿನ ಒಲವನ್ನು ವ್ಯಕ್ತಪಪಡಿಸಿ ಅಲ್ಪಸಂಖ್ಯಾತರ ವಿರುದ್ಧದ ಆದೇಶಗಳನ್ನು ತಂದರು. ಈ ಹಿನ್ನೆಲೆ ಕೋಮುವಾದಕ್ಕೆ ನರಸಿಂಹ ರಾವ್ ಕಾರಣ ಎಂದು ಆರೋಪಿಸಿದರು.