ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆ ವರದಿಗಳನ್ನು ಪರಿಶೀಲಿಸಲು ಐವರು ಸದಸ್ಯರ ವೈದ್ಯಕೀಯ ಮಂಡಳಿಯ ವಿಧಿವಿಜ್ಞಾನ ತಜ್ಞರನ್ನು ಏಮ್ಸ್ ಶುಕ್ರವಾರ ರಚಿಸಿದೆ.
ಸುಶಾಂತ್ ಸಾವು ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರವಾಗಿದ್ದು, ಸಿಬಿಐ ತನಿಖೆಗೆ ನೆರವಾಗುವಂತೆ ತಮ್ಮ ಸಹಾಯಕ್ಕಾಗಿ ಏಮ್ಸ್ ಆಸ್ಪತ್ರೆಯನ್ನು ಸಂಪರ್ಕಿಸಿತ್ತು. ಆ ಬಳಿಕ ಐವರನ್ನೊಳಗೊಂಡ ವಿಧಿವಿಜ್ಞಾನ ತಜ್ಞರ ತಂಡವನ್ನು ಸುಶಾಂತ್ ಶವಪರೀಕ್ಷೆ ವರದಿಗಳನ್ನು ಪರಿಶೀಲಿಸಲು ಏಮ್ಸ್ ರಚಿಸಿದೆ.