ನವದೆಹಲಿ : ಕೋವಿಡ್-19 ಆರೋಗ್ಯ ಸೇವೆಯಲ್ಲಿ ನಿತರತರಾಗಿರುವ ವೈದ್ಯಕೀಯ ಸಿಬ್ಬಂದಿಗೆ ಏಮ್ಸ್ ಆಸ್ಪತ್ರೆ ಸುತ್ತೋಲೆ ಒಂದನ್ನು ಹೊರಡಿಸಿದೆ.
ಎನ್ 95 ಮಾಸ್ಕ್ಗಳನ್ನು ನಾಲ್ಕು ಬಾರಿ ಮರುಬಳಕೆ ಮಾಡುವಂತೆ ಸುತ್ತೋಲೆ ಹೊರಡಿಸಿದ ಏಮ್ಸ್ - ಸುತ್ತೋಲೆ ಹೊರಡಿಸಿದ ಏಮ್ಸ್
ಸುತ್ತೋಲೆ ಹೊರಡಿಸಿರುವ ಏಮ್ಸ್ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಶರ್ಮಾ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ತಲಾ ಐದು ಎನ್ 95 ಮಾಸ್ಕ್ಗಳನ್ನು ನೀಡಲಾಗುವುದು. ಇದನ್ನು ಕನಿಷ್ಠ ನಾಲ್ಕು ಬಾರಿ ಬಳಸುವಂತೆ ತಿಳಿಸಿದ್ದಾರೆ.
![ಎನ್ 95 ಮಾಸ್ಕ್ಗಳನ್ನು ನಾಲ್ಕು ಬಾರಿ ಮರುಬಳಕೆ ಮಾಡುವಂತೆ ಸುತ್ತೋಲೆ ಹೊರಡಿಸಿದ ಏಮ್ಸ್ AIIMS asks doctors to reuse N95 masks 4 times](https://etvbharatimages.akamaized.net/etvbharat/prod-images/768-512-6702574-42-6702574-1586277399750.jpg)
ಕೋವಿಡ್ ಸೋಂಕಿತರ ಆರೈಕೆಯಲ್ಲಿ ತೊಡಗಗಿರುವ ಆರೋಗ್ಯ ಕಾರ್ಯಕರ್ತರಿಗೆ ಎನ್ 95 ಮಾಸ್ಕ್ ವಿತರಣೆ ಎಂಬ ಶೀರ್ಷಿಕೆಯಡಿ ಸುತ್ತೋಲೆ ಹೊರಡಿಸಿರುವ ಏಮ್ಸ್ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಶರ್ಮಾ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ತಲಾ ಐದು ಎನ್ 95 ಮಾಸ್ಕ್ಗಳನ್ನು ನೀಡಲಾಗುವುದು. ಇದನ್ನು ಕನಿಷ್ಠ ನಾಲ್ಕು ಬಾರಿ ಬಳಸಬೇಕು. ಇದರಿಂದ 20 ದಿನಗಳವರೆಗೆ ಬಳಸಬಹುದು. ಕೋವಿಡ್ ರೋಗಿಗಳ ನೇರ ಆರೈಕೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿ ಎನ್ 95 ಮಾಸ್ಕ್ ಬಳಸುವುದು ಕಡ್ಡಾಯವಾಗಿದೆ. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ವೈಜ್ಞಾನಿಕವಾಗಿ ಸಾಭಿತಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಏಮ್ಸ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ.ಶ್ರೀನಿವಾಸ್ ರಾಜ್‌ಕುಮಾರ್ , ಅಗತ್ಯವಿರುವಷ್ಟು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಮತ್ತು ಎನ್ 95 ಮಾಸ್ಕ್ ವಿತರಿಸುವಂತೆ ಕೋರಿ ಆಸ್ಪತ್ರೆ ಆಡಳಿತ ಮಂಡಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.