ಕರ್ನಾಟಕ

karnataka

ETV Bharat / bharat

ಬ್ಯಾನರ್​ ಬಿದ್ದು ಯುವತಿ ಸಾವು ಪ್ರಕರಣ: ಎಐಎಡಿಎಂಕೆ ಮುಖಂಡನ ಬಂಧನ

ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಬ್ಯಾನರ್​ ಬಿದ್ದು ಮಹಿಳಾ ಟೆಕ್ಕಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖಂಡನೋರ್ವನ ಬಂಧನ ಮಾಡುವಲ್ಲಿ ತಮಿಳುನಾಡಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಬ್ಯಾನರ್​ ಬಿದ್ದು ಯುವತಿ ಸಾವು

By

Published : Sep 27, 2019, 11:06 PM IST

ಚೆನ್ನೈ:ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಬ್ಯಾನರ್​ ಬಿದ್ದು ಮಹಿಳಾ ಟೆಕ್ಕಿಯೊಬ್ಬಳು ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಎಐಎಡಿಎಂಕೆ ಪಕ್ಷದ ಮುಖಂಡನನ್ನ ಬಂಧನ ಮಾಡುವಲ್ಲಿ ತಮಿಳುನಾಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಚೆನ್ನೈನಲ್ಲಿ ಬ್ಯಾನರ್‌ ಬಿದ್ದು ಯುವತಿ ಸಾವು, ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್‌ ಛೀಮಾರಿ

ಕಳೆದ ಸೆಪ್ಟೆಂಬರ್​ 12ರಂದು 23 ವರ್ಷದ ಶುಭಶ್ರೀ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ, ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆಯ ಬೃಹತ್ ಬ್ಯಾನರ್​ ಹೊಡೆತಕ್ಕೆ ಯುವತಿ ಆಯತಪ್ಪಿ ಸ್ಕೂಟರ್​ನಿಂದ ಕೆಳಗೆ ಬಿದ್ದಾಗ ಆಕೆಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ, ಡೆಪ್ಯುಟಿ ಸಿಎಂ ಪನ್ನಿರ್​ಸೆಲ್ವಂ ಹಾಗೂ ದಿವಂಗತ ಮಾಜಿ ಸಿಎಂ ಜಯಲಲಿತಾ ಭಾವಚಿತ್ರಗಳಿದ್ದ ಕೂಡಿದ್ದ ಮೆಡಿಕಲ್​ ಕ್ಯಾಂಪ್​ನ ಬ್ಯಾನರ್​ ಇದ್ದಾಗಿತ್ತು.

ಬ್ಯಾನರ್​ ಬಿದ್ದು ಯುವತಿ ಸಾವು

ಘಟನೆ ನಡೆಯುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಎಐಎಡಿಎಂಕೆ ಪಕ್ಷದ ಸ್ಥಳೀಯ ಮುಖಂಡ ಹಾಗೂ ಮಾಜಿ ಕೌನ್ಸಿಲರ್ ಜಯಗೋಪಾಲ್​​ನನ್ನು ಇದೀಗ ಪೊಲೀಸರು ಕೃಷ್ಣಗಿರಿಯಲ್ಲಿ ಬಂಧಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮದ್ರಾಸ್​ ಹೈಕೋರ್ಟ್​​ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿ, ಮೃತಪಟ್ಟ ಶುಭಶ್ರೀ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಹಣ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

ABOUT THE AUTHOR

...view details