ಕರ್ನಾಟಕ

karnataka

ETV Bharat / bharat

ತಮಿಳುನಾಡು ವಿಧಾನಸಭೆ ಚುನಾವಣೆ: ಸಿಎಂ ಅಭ್ಯರ್ಥಿಯಾಗಿ ಹಾಲಿ ಸಿಎಂ ಹೆಸರು ಘೋಷಣೆ - ತಮಿಳುನಾಡು ವಿಧಾನಸಭೆ

2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ತಮಿಳುನಾಡು ಹಾಲಿ ಸಿಎಂ ಕೆ. ಪಳನಿಸ್ವಾಮಿಯವರನ್ನು ಎಐಎಡಿಎಂಕೆ ಘೋಷಿಸಿದೆ.

Nadu Assembly polls
ಪಳನಿಸ್ವಾಮಿ ಘೋಷಣೆ

By

Published : Oct 7, 2020, 1:25 PM IST

ತಮಿಳುನಾಡು/ ಚೆನ್ನೈ: 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕೆ. ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಸಂಬಂಧ 11 ಸದಸ್ಯರ ಸಲಹಾ​ ಸಮಿತಿಯನ್ನು ಎಐಎಡಿಎಂಕೆ ರಚನೆ ಮಾಡಿತ್ತು. ಈ ಸಮಿತಿ ಪಳನಿಸ್ವಾಮಿ ಅವರನ್ನೇ 2021ರ ವಿಧಾನಸಭೆ ಚುನಾವಣೆಗೆ ಸಿಎಂ ಅಭ್ಯರ್ಥಿಯಾಗಿ ಮರು ಆಯ್ಕೆ ಮಾಡಿ ಹೆಸರು ಘೋಷಿಸಿದೆ.

ಇ.ಮಧುಸುದಾನನ್ ನೇತೃತ್ವದಲ್ಲಿ ಸಮಾಲೋಚನೆ ನಡೆಸಿ ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಸಿಎಂ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ. ಹಾಗು ಆಯ್ಕೆಗೆಂದು ರಚಿಸಲಾದ ಸಲಹಾ​ ಸಮಿತಿಯ ಸದಸ್ಯರು ತಮ್ಮ ಹೆಸರನ್ನು ನಾಮನಿರ್ದೇಶನ ಮಾಡಿ ಮುಖ್ಯಮಂತ್ರಿಯಾಗಿ ಘೋಷಿಸಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕೆ. ಪಳನಿಸ್ವಾಮಿ ಹಾಗೂ ಡಿಸಿಎಂ ಒ. ಪನ್ನೀರ್​​ಸೆಲ್ವಂ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನಲಾದ ವದಂತಿಗೆ ತೆರೆ ಬಿದ್ದಿದೆ.

2021 ರ ವಿಧಾನಸಭಾ ಚುನಾವಣೆಗೆ ಹಾಲಿ ಮುಖ್ಯಮಂತ್ರಿಯನ್ನು ಅಭ್ಯರ್ಥಿಯಾಗಿ ಹೆಸರಿಸದಿದ್ದಲ್ಲಿ ಪಕ್ಷ ಮತ್ತು ರಾಜ್ಯದ ಸರ್ಕಾರ ಪ್ರತಿಪಕ್ಷಗಳ ಹಾಗೂ ಡಿಎಂಕೆಯ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಭೆ ಅಭಿಪ್ರಾಯಪಟ್ಟಿದೆ.

ಸೆಪ್ಟಂಬರ್ 28 ರಂದು ನಡೆದ ಎಐಎಡಿಎಂಕೆ ಕಾರ್ಯಕಾರಿ ಪಕ್ಷದ ಸಭೆಯಲ್ಲಿ ಪಕ್ಷದ ಮುಖ್ಯಮಂತ್ರಿ ಆಯ್ಕೆ ನಡೆದ ಚರ್ಚೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತು ಕೆ. ಪಳನಿಸ್ವಾಮಿ ಹಾಗೂ ಡಿಸಿಎಂ ಒ. ಪನ್ನೀರ್​​ಸೆಲ್ವಂ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳ ಉಪಶಮನಕ್ಕಾಗಿ ಈ ತಂತ್ರ ಹೆಣೆಯಲಾಗಿದೆ ಎಂಬ ಮಾತುಗಳು ಕೇಳಿ ಬರ್ತಿದೆ.

ABOUT THE AUTHOR

...view details