ನವದೆಹಲಿ:ಏರ್ ಇಂಡಿಯಾ ಪೈಲಟ್‌ಗಳ ವೇತನ ಕಡಿತವನ್ನು ಪರಿಶೀಲಿಸಲು ತುರ್ತು ಸಭೆ ಕರೆಯುವಂತೆ ಒತ್ತಾಯಿಸಿ ಏರ್ ಇಂಡಿಯಾ ಪೈಲಟ್ ಯೂನಿಯನ್‌ಗಳು ಮತ್ತೊಮ್ಮೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿದ್ದಾರೆ.
ವೇತನ ಕಡಿತಕ್ಕೆ ವಿರೋಧ: ಸಭೆ ಕರೆಯುವಂತೆ ಸಚಿವರಿಗೆ ಪತ್ರ ಬರೆದ ಏರ್ ಇಂಡಿಯಾ ಪೈಲಟ್ ಯೂನಿಯನ್ - Air India pilot unions letter to Civil Aviation Minister Hardeep Singh Puri
ನಮ್ಮೃ ಅನೇಕ ಸದಸ್ಯ ಪೈಲಟ್‌ಗಳು ಅವರ ವೇತನ ಕಡಿತ ಮತ್ತು ಅದರಿಂದ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ತಮ್ಮ ಮಕ್ಕಳ ಶಿಕ್ಷಣದ ಅಗತ್ಯತೆಗಳನ್ನು ಪೂರೈಸಲು ಅಥವಾ ವಯಸ್ಸಾದ ತಂದೆ - ತಾಯಿಯನ್ನು ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸೋಮವಾರ ಬರೆದಿರುವ ಜಂಟಿ ಪತ್ರದಲ್ಲಿ, ಭಾರತೀಯ ಪೈಲಟ್ಸ್ ಗಿಲ್ಡ್ (ಐಪಿಜಿ) ಮತ್ತು ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘ (ಐಸಿಪಿಎ), ನಮ್ಮ ಅನೇಕ ಸದಸ್ಯ ಪೈಲಟ್‌ಗಳು ಅವರ ವೇತನ ಕಡಿತ ಮತ್ತು ಅದರಿಂದ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ತಮ್ಮ ಮಕ್ಕಳ ಶಿಕ್ಷಣದ ಅಗತ್ಯತೆಗಳನ್ನು ಪೂರೈಸಲು ಅಥವಾ ವಯಸ್ಸಾದ ತಂದೆ - ತಾಯಿಯನ್ನು ನೋಡಿಕೊಳ್ಳಲು ಶ್ರಮಿಸುತ್ತಿದ್ದಾರೆ. ಈ ವೇತನ ಕಡಿತ ಸಮರ್ಥನೀಯವಲ್ಲ. ಏರ್ ಇಂಡಿಯಾದ ಪೈಲಟ್‌ಗಳು ಮತ್ತು ಅದರ ಅಂಗಸಂಸ್ಥೆಗಳು ಅನುಭವಿಸುತ್ತಿರುವ ವೇತನ ಕಡಿತವನ್ನು ಪರಿಶೀಲಿಸುವ ಸಮಯ ಇದು ಎಂದು ಪತ್ರದಲ್ಲಿ ಸೇರಿಸಲಾಗಿದೆ.
ವಿಶೇಷವೆಂದರೆ, ಭಾರತದ ಅತಿದೊಡ್ಡ ವಿಮಾನಯಾನ ಇಂಡಿಗೊ ತನ್ನ ಪೈಲಟ್‌ಗೆ ವೇತನವಿಲ್ಲದೆ ರಜೆ (ಎಲ್‌ಡಬ್ಲ್ಯೂಪಿ) ನೀಡಿದೆ. ಐದು ವರ್ಷಗಳ ಕಾಲ ಪೈಲಟ್‌ಗಳ ಶೇಕಡಾ 25 ರಷ್ಟು ವೇತನ ಕಡಿತವನ್ನು "ಕಾನೂನುಬಾಹಿರ" ಎಂದು ನಿರ್ಧರಿಸಿದೆ.