ನವದೆಹಲಿ:ಈ ಬಾರಿಯ ಕೇಂದ್ರ ಬಜೆಟ್ ಅಧಿವೇಶನವನ್ನ ಜನವರಿ 31 ರಿಂದ ಫೆಬ್ರವರಿ 11ರವರೆಗೆ ನಡೆಸಲು ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಜ.31ಕ್ಕೆ ಕೇಂದ್ರ ಬಜೆಟ್ ಅಧಿವೇಶನ! - 2020-21 ನೇ ಸಾಲಿನ ಕೇಂದ್ರ ಬಜೆಟ್
2020-21 ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನವನ್ನ ಜನವರಿ 31 ರಿಂದ ಫೆಬ್ರವರಿ 11ರವರೆಗೆ ನಡೆಸಲು ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಫೆಬ್ರವರಿ ಒಂದರಂದು ಸರ್ಕಾರ ತನ್ನ ಬಜೆಟ್ ಮಂಡನೆ ಮಾಡಲಿದೆ. ಚುನಾವಣೆ ಬಳಿಕ ಮೊದಲ ಬಜೆಟ್ ಮಂಡನೆ ಮಾಡಿದ್ದ ಆರ್ಥಿಕ ಮಂತ್ರಿ ನಿರ್ಮಲಾ ಸೀತಾರಾಮನ್ ತಮ್ಮ ಎರಡನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರದ ಮೂಲಗಳಿಂದ ಹೊರ ಬಿದ್ದಿದೆ.
ಇನ್ನೊಂದೆಡೆ ಎರಡನೇ ಹಂತದ ಬಜೆಟ್ ಅಧಿವೇಶನವನ್ನ ಮಾರ್ಚ್ 2 ರಿಂದ ಏಪ್ರಿಲ್ ಮೂರರವರೆಗೂ ನಡೆಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಈ ಬಾರಿಯ ಅಧಿವೇಶನ ಭಾರಿ ಕಾವಿನಿಂದ ಕೂಡಿರುವ ಸಾಧ್ಯತೆಗಳಿವೆ. ಕಳೆದ ಅಧಿವೇಶನದಲ್ಲಿ ಮಂಡನೆ ಆಗಿ ಸಂಸತ್ನ ಅನುಮೋದನೆ ಪಡೆದಿರುವ ಸಿಎಎ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ. ಉಳಿದಂತೆ ಆರ್ಥಿಕ ಕುಸಿತ ಬಹುದೊಡ್ಡ ಸದ್ದು ಮಾಡುವ ಸಾಧ್ಯತೆ ಇದೆ.