ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ತೀರ್ಪು ಹೊರಬೀಳಲಿದ್ದು, ಈ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಅಯೋಧ್ಯೆ ಭೂ ವಿವಾದದ ತೀರ್ಪು ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಗಲಾಟೆಗೆ ಕಾರಣವಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ 4000 ಪ್ಯಾರಾಮಿಲಿಟರಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಬರೋಬ್ಬರಿ 4000 ಸೈನಿಕರನ್ನು ನಿಯೋಜನೆ ಮಾಡಿ ಆದೇಶಿಸಿದೆ. ನವೆಂಬರ್ 18ರ ತನಕ ಪ್ಯಾರಾಮಿಲಿಟರಿ ಸೈನಿಕರು ಭದ್ರತೆ ನೀಡಲಿದ್ದಾರೆ.
ಅಯೋಧ್ಯೆ ಹಾಗೂ ವಾರಣಾಸಿ ಹೊರತಾಗಿ ಅತಿಸೂಕ್ಷ್ಮ ಪ್ರದೇಶಗಳಾದ ಕಾನ್ಪುರ, ಅಲಿಘಡ, ಲಖನೌ, ಅಜಂಗಢದಲ್ಲಿ ಪ್ಯಾರಾಮಿಲಿಟರಿಯನ್ನು ನಿಯೋಜನೆ ಮಾಡಲಾಗಿದೆ.