ಕರ್ನಾಟಕ

karnataka

ETV Bharat / bharat

ಜೈಪುರ ಕೃಷಿ ವಿಶ್ವವಿದ್ಯಾಲಯದ ಹೊಸ ತಂತ್ರಜ್ಞಾನದಿಂದ ನೀರಿನ ದಾಹದ ಬೇಡಿಕೆ ಪೂರೈಕೆ!

ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀ ಕರಣ್​ ನರೇಂದ್ರ ಕೃಷಿ ವಿಶ್ವವಿದ್ಯಾಲಯ ಇದೀಗ ಆಪತ್ಬಾಂದವನಾಗಿದ್ದು, ನೀರಿನ ದಾಹ ತೀರಿಸಿದೆ.

Agriculture University
Agriculture University

By

Published : Jul 13, 2020, 10:48 PM IST

ಜೈಪುರ: ಕಳೆದ 25 ವರ್ಷಗಳಿಂದ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿದ್ದ ಜೈಪುರದ ಜಾಬ್ನರ್​ ಪ್ರದೇಶ ಸೇರಿದಂತೆ ಅನೇಕ ನಗರಗಳಿಗೆ ಇದೀಗ ಕೃಷಿ ವಿಶ್ವವಿದ್ಯಾಲಯ ಆಪತ್ಬಾಂದವನಾಗಿದ್ದು, ಕಂಡು ಹಿಡಿಯಲಾಗಿರುವ ಹೊಸ ತಂತ್ರಜ್ಞಾನದಿಂದ ಅವರ ನೀರಿನ ದಾಹ ತೀರಿಸಲಾಗುತ್ತಿದೆ.

ರಾಜಸ್ಥಾನದ ಪಶ್ಚಿಮ ಪ್ರದೇಶಗಳಾದ ಬಾರ್ಮರ್​, ಜೈಸಲ್ಮೇರ್​, ಬಿಕಾನೇರ್​​ ಜನರು ನೀರು ಪಡೆದುಕೊಳ್ಳಲು ಕಿಲೋಮೀಟರ್​​ ಪ್ರಯಾಣಿಸಬೇಕಾಗಿತ್ತು. ಜತೆಗೆ ರಾಜಧಾನಿ ಜೈಪುರದಿಂದ 40 ಕಿ.ಮೀ ದೂರದಲ್ಲಿರುವ ಜಾಬ್ನರ್​ ಪ್ರದೇಶದ ಸ್ಥಿತಿ ಕೂಡ ಹೇಳತೀರದಾಗಿದ್ದು, ಕುಡಿಯುವ ನೀರು ಪಡೆದುಕೊಳ್ಳಲು ಪ್ರತಿದಿನ ಟ್ಯಾಂಕರ್​​ಗಳ ಮೊರೆ ಹೋಗಬೇಕಾಗಿತ್ತು. ಆದರೆ ಇದೀಗ ವಿವಿಯ ನೀರಿನ ಕೊಯ್ಲು ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲಾಗಿದೆ.

ಜೈಪುರ ಕೃಷಿ ವಿಶ್ವವಿದ್ಯಾಲಯ ಹೊಸ ತಂತ್ರಜ್ಞಾನ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ಸ್ಥಾಪನೆಗೊಂಡಿರುವ ಅತ್ಯಂತ ಹಳೇ ಕೃಷಿ ವಿಶ್ವವಿದ್ಯಾಲಯ ಜಾಬ್ನರ್​ ಪ್ರದೇಶದಲ್ಲಿದೆ. 125 ಹೆಕ್ಟೇರ್​ ಪ್ರದೇಶದಲ್ಲಿರುವ ಈ ವಿವಿ 1985ರವರೆಗೆ ಯಾವುದೇ ನೀರಿನ ತೊಂದರೆ ಅನುಭವಿಸಿರಲಿಲ್ಲ. ಆದರೆ 1985ರ ನಂತರ ಹಾಗೂ 1995ರ ಹೊತ್ತಿಗೆ ಅಂತರ್ಜಲ ಸಂಪೂರ್ಣವಾಗಿ ಕುಸಿದು, 25 ವರ್ಷಗಳಿಂದ ನೀರಿನ ಕೊರತೆ ಅನುಭವಿಸುವಂತಾಗಿದ್ದು, ಇದರ ಪಕ್ಕದ ಹಳ್ಳಿ, ನಗರಗಳಲ್ಲೂ ಈ ಸಮಸ್ಯೆ ಉದ್ಭವವಾಗಿತ್ತು.

ಪುರಸಭೆ ಅಧಿಕಾರಿಗಳ ಸಹಾಯದಿಂದ ಜ್ವಾಲಾ ಮಾತಾ ದೇವಸ್ಥಾನದ ಬೆಟ್ಟದ ಮೇಲೆ ಹರಿಯುವ ನೀರಿನಿಂದ ಇದೀಗ ನೀರಿನ ದಾಹ ತೀರಿಸಿಕೊಂಡಿದ್ದು, ಅದಕ್ಕಾಗಿ 33 ಲಕ್ಷ ಲೀಟರ್​ ಸಾಮರ್ಥ್ಯದ ಮೂರು ಕೊಳವೆ ಬಾವಿ ಮತ್ತು 3 ಕೋಟಿ ಲೀಟರ್​ ಸಾಮರ್ಥ್ಯದ ಒಂದು ಕೊಳವೆ ಬಾವಿ ನಿರ್ಮಿಸಲಾಗಿದೆ. ಬೆಟ್ಟದ ಕೆಳಗೆ ಹರಿದು ವ್ಯರ್ಥವಾಗುತ್ತಿದ್ದ ನೀರನ್ನ ಈ ಕೊಳದಲ್ಲಿ ಸಂಗ್ರಹಿಸಲು ಗಮನಹರಿಸಲಾಗಿದ್ದು, ಹೀಗಾಗಿ ನೀರು ಪೂರೈಕೆ ಪುನರ್ಭತಿಯಾಗಿದೆ. ಜತೆಗೆ ನೀರಿನ ಅಂತರ್ಜಲ ಮಟ್ಟ ಹೆಚ್ಚಾಗಿದೆ.

ABOUT THE AUTHOR

...view details