ಆಗ್ರಾ:ಸ್ಪಾ ಸೆಂಟರ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿ ಮಹಿಳೆಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಆಕೆಯ ಸಾವಿಗೆ ನಿರುದ್ಯೋಗವೇ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ, ಪೊಲೀಸರ ರೈಡ್ ನಂತರ ವಿದೇಶಿ ಮಹಿಳೆ ಆತ್ಮಹತ್ಯೆ.... ಕಾರಣ?
ಉತ್ತರಪ್ರದೇಶದ ಆಗ್ರಾದಲ್ಲಿನ ಔರಾದ್ನಲ್ಲಿನ ಸ್ಪಾ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿ ಮಹಿಳೆಯೋರ್ವಳು ಇದೀಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಸ್ಪಾ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಈ ಅಡ್ಡೆ ಮೇಲೆ ಕಳೆದ ಕೆಲ ತಿಂಗಳ ಹಿಂದೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕೆಲ ವಿದೇಶಿ ಮಹಿಳೆಯರನ್ನ ರಕ್ಷಣೆ ಮಾಡಿ ತದನಂತರ ಅವರನ್ನ ರಿಲೀಸ್ ಮಾಡಲಾಗಿತ್ತು. ಇದಾದ ಬಳಿಕ ನಿರುದ್ಯೋಗ ಸಮಸ್ಯೆಗೆ ಒಳಗಾಗಿದ್ದ ಮಹಿಳೆ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ ಬಳಿ ಸೊಸೈಡ್ ನೋಟ್ ಸಿಕ್ಕಿದ್ದು, ಅದರಲ್ಲಿ ಈ ಮಾಹಿತಿ ಹೊರಹಾಕಿದ್ದಾಳೆ.
ಅಪಾರ್ಟ್ಮೆಂಟ್ವೊಂದರಲ್ಲಿ ಈ ವಿದೇಶಿ ಮಹಿಳೆ ವಾಸವಾಗಿದ್ದು, ಅಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ ಆಕೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.